ADVERTISEMENT

ಬಿಜೆಪಿ, ಬಿಆರ್‌ಎಸ್‌ ಪಕ್ಷಗಳು ಕೋಮುಗಲಭೆ ಪ್ರಚೋದಿಸುತ್ತಿವೆ: ಅಜರುದ್ದೀನ್

ಪಿಟಿಐ
Published 7 ನವೆಂಬರ್ 2025, 13:40 IST
Last Updated 7 ನವೆಂಬರ್ 2025, 13:40 IST
   

ಹೈದರಾಬಾದ್‌: ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಬಿಆರ್‌ಎಸ್‌ ರಾಜ್ಯದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದು, ಕೋಮುಗಲಭೆಗೆ ಪ್ರಚೋದಿಸುತ್ತಿವೆ ಎಂದು ತೆಲಂಗಾಣ ಸಚಿವ ಹಾಗೂ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಅಜರುದ್ದೀನ್ ಅವರು ಶುಕ್ರವಾರ ಆರೋಪಿಸಿದ್ದಾರೆ.

ಜುಬ್ಲಿ ಹಿಲ್‌ ಉಪ ಚುನಾವಣೆಯಲ್ಲಿ ತಮ್ಮ ಭವಿಷ್ಯ ನಿರ್ಧಾರವಾಗಲಿದೆ ಎನ್ನುವ ಭಯದಲ್ಲಿ ಬಾಯಿಗೆ ಬಂದಂತೆ ವಿರೋಧ ಪಕ್ಷಗಳು ಮಾತನಾಡುತ್ತಿದ್ದಾರೆ. ಅವರಿಗೆ ಕೋಮು ವಿಷಯಗಳನ್ನು ಬಿಟ್ಟರೆ, ಮಾತನಾಡಲು ಬೇರೆ ಯಾವುದೇ ವಿಷಯಗಳಿಲ್ಲ. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ನವೀನ್‌ ಯಾದವ್‌ ಗೆಲ್ಲಲಿದ್ದಾರೆ ಎಂದು ಹೇಳಿದ್ದಾರೆ.

ನಿಜಾಮರ ಕಾಲದಿಂದಲೂ ಹೈದರಾಬಾದ್‌ನಲ್ಲಿ ಹಿಂದೂ ಹಾಗೂ ಮುಸ್ಲಿಂರು ಸಹಬಾಳ್ವೆಯಿಂದ ಇದ್ದಾರೆ ಎಂದು ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಹೇಳಿದ್ದರು.

ADVERTISEMENT

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಸಚಿವ ಬಂಡಿ ಸಂಜಯ್‌ ಕುಮಾರ್‌, ಮುಸ್ಲಿಂ ಟೋಪಿ ಹಾಕಿಕೊಳ್ಳುವ ರೇವಂತ ರೆಡ್ಡಿ ಅವರು ಸಾಧ್ಯವಾದರೆ ಅಜರುದ್ದೀನ್ ಅವರಿಗೆ ತಿಲಕವಿಡುವಂತೆ ಮಾಡಲಿ ಎಂದಿದ್ದರು.

ನವೆಂಬರ್‌ 11 ರಂದು ಜುಬ್ಲಿ ಹಿಲ್‌ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.