ADVERTISEMENT

ಜೋಧಪುರದಲ್ಲಿ ಹಿಂಸಾಚಾರ; ಪೊಲೀಸರಿಗೆ ಗಾಯ

ಪಿಟಿಐ
Published 22 ಜೂನ್ 2024, 16:16 IST
Last Updated 22 ಜೂನ್ 2024, 16:16 IST
   

ಜೋಧಪುರ (ಪಿಟಿಐ): ಜೋಧಪುರದಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದಿದ್ದು, ಇಬ್ಬರು ಪೊಲೀಸರು ಗಾಯಗೊಂಡು, ಎರಡು ವಾಹನಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೂರ್‌ಸಾಗರ್ ಪ್ರದೇಶದ ರಾಜಾರಾಮ ವೃತ್ತದಲ್ಲಿರುವ ಈದ್ಗಾದ ಹಿಂಭಾಗದಲ್ಲಿ ಗೇಟ್ ಅಳವಡಿಸುವ ಸಂಬಂಧ ಶುಕ್ರವಾರ ರಾತ್ರಿ ಹಿಂಸಾಚಾರ ಆರಂಭವಾಯಿತು ಎಂದು ಜೋಧಪುರ ಪಶ್ಚಿಮ ಡಿಸಿಪಿ ರಾಜೇಶ್ ಕುಮಾರ್ ಯಾದವ್ ಹೇಳಿದ್ದಾರೆ.

ಅಲ್ಲಿ ಗೇಟ್ ಅಳವಡಿಸಿದರೆ, ಜನರ ಓಡಾಟ ಹೆಚ್ಚಾಗುತ್ತದೆ ಎಂದು ಸ್ಥಳೀಯರು ವಿರೋಧಿಸಿದ್ದರಿಂದ ಸಂಘರ್ಷ ಹುಟ್ಟಿಕೊಂಡಿತು. ನಂತರ ಅದು ಕಲ್ಲು ಎಸೆತ, ಬೆಂಕಿ ಹಚ್ಚುವುದು ಮತ್ತು ವಿದ್ವಂಸಕ ಕೃತ್ಯಗಳಿಗೆ ತಿರುಗಿತು. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು, ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪ್ರಕರಣದ ಸಂಬಂಧ 51 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.