ADVERTISEMENT

ಕೋವಿಡ್‌: ಸೋಂಕು ತಡೆಯುವ ಕಂಪ್ಯೂಟರ್‌ ನಿರ್ಮಿತ ಪ್ರೋಟೀನ್‌

ಪಿಟಿಐ
Published 14 ಸೆಪ್ಟೆಂಬರ್ 2020, 12:04 IST
Last Updated 14 ಸೆಪ್ಟೆಂಬರ್ 2020, 12:04 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ಕಂಪ್ಯೂಟರ್‌ ಮೂಲಕ ಅಭಿವೃದ್ಧಿಪಡಿಸಿದ ರೋಗನಿರೋಧಕ ಪ್ರೋಟೀನ್‌ಗಳು, ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿದ ಮನುಷ್ಯರ ಕೋಶಗಳನ್ನು ಕೋವಿಡ್‌–19ನಿಂದ ರಕ್ಷಿಸುವ ಸಾಮರ್ಥ್ಯ ಹೊಂದಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

‘ಸೈನ್ಸ್‌’ ಹೆಸರಿನ ನಿಯತಕಾಲಿಕದಲ್ಲಿ ಈ ಕುರಿತ ಅಧ್ಯಯನ ವರದಿ ಪ್ರಕಟವಾಗಿದೆ. ಪ್ರಯೋಗದ ಸಂದರ್ಭದಲ್ಲಿ ಸಂಭಾವ್ಯ ಲಸಿಕೆಯಾದ ಎಲ್‌ಸಿಬಿ1, ಕೋವಿಡ್‌–19ಗೆ ಕಾರಣವಾಗುವ ಕೊರೊನಾ ವೈರಸ್‌ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ.

ಕಂಪ್ಯೂಟರ್‌ ಮೂಲಕ ಅಭಿವೃದ್ಧಿಪಡಿಸಿದ ರೋಗನಿರೋಧಕ ಪ್ರೋಟೀನ್‌ಗಳು, ಕೋಶಗಳಿಗೆ ಕೊರೊನಾ ವೈರಸ್‌ ಸೋಂಕು ಹರಡದಂತೆ ತಡೆಯುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಈ ಲಸಿಕೆಯನ್ನು ಪ್ರಸ್ತುತ ಇಲಿಗಳ ಮೇಲೆ ಪ್ರಯೋಗಿಸಲಾಗುತ್ತಿದೆ ಎಂದು ಅಮೆರಿಕದ ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.