ಹೈದರಾಬಾದ್: ತೆಲಂಗಾಣದಲ್ಲಿ ಮೇ 10ರಿಂದ 31ರವರೆಗೆ 72ನೇ ವಿಶ್ವಸುಂದರಿ ಸ್ಪರ್ಧೆ ನಡೆಯಲಿದ್ದು, ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು ಈಗಾಗಲೇ ನಗರಕ್ಕೆ ಬರುತ್ತಿದ್ದಾರೆ.
ಕೆನಡಾದ ಎಮ್ಮಾ ಡಿಯನ್ನಾ ಕ್ಯಾಥರಿನ್ ಮಾರಿಸನ್ ಮತ್ತು ಬ್ರೆಜಿಲ್‌ನ ಜೆಸ್ಸಿಕಾ ಸ್ಕ್ಯಾಂಡಿಯುಝಿ ಪೆಡ್ರೊಸೊ ಅವರನ್ನು ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಸ್ಪರ್ಧೆಯ ಪದಾಧಿಕಾರಿಯಾದ ಜೊನಾಥನ್ ಮಾರ್ಕ್ ಶಾ ಸಹ ನಗರಕ್ಕೆ ಬಂದಿಳಿದರು.
120 ದೇಶಗಳ ಸ್ಪರ್ಧಿಗಳು ಮೇ 2ರಿಂದ 8ರೊಳಗೆ ಹೈದರಾಬಾದ್‌ಗೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
21 ದಿನ ಸ್ಪರ್ಧೆ ನಡೆಯಲಿದ್ದು, ಗ್ರ್ಯಾಂಡ್ ಫಿನಾಲೆ ಸೇರಿದಂತೆ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳು ಹೈದರಾಬಾದ್‌ನಲ್ಲಿ ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.