ADVERTISEMENT

ಚೀನಾ ಗಡಿ ತಂಟೆ: ಪ್ರಧಾನಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ

ಪಿಟಿಐ
Published 6 ಅಕ್ಟೋಬರ್ 2023, 14:12 IST
Last Updated 6 ಅಕ್ಟೋಬರ್ 2023, 14:12 IST
ಜೈರಾಮ್ ರಮೇಶ್
ಜೈರಾಮ್ ರಮೇಶ್   

ನವದೆಹಲಿ: ಚೀನಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ‘ವಿದೇಶಿ ಶಕ್ತಿಗಳಿಂದ ನಿಜವಾಗಿಯೂ ನಿಯಂತ್ರಿಸಲ್ಪಡುತ್ತಿರುವವರು ಯಾರು’ ಎಂದು ಪ್ರಶ್ನಿಸಿದೆ. 

ಪ್ರಧಾನಿ ಮೋದಿ ಹಾಗೂ ಷಿ ಜಿನ್‌ಪಿಂಗ್ ಅವರು ಸಾಬರಮತಿ ನದಿಯ ದಡದಲ್ಲಿ ಭೇಟಿ ಮಾಡಿದ ವಿಡಿಯೊವನ್ನು ‘ಎಕ್ಸ್‌’ ಜಾಲತಾಣದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ಪ್ರಧಾನಿ ಮೋದಿ ಅವರು ಒಟ್ಟಾರೆ 20 ಸಲ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರನ್ನು ಭೇಟಿಯಾಗಿದ್ದಾರೆ. 2020ರ ಜೂನ್ 10ರಂದು ಗಡಿ ಅತಿಕ್ರಮಣದ ಬಗ್ಗೆ ಚೀನಾಕ್ಕೆ ಮೋದಿ ಅವರೇ ಬಹಿರಂಗವಾಗಿ ಕ್ಲೀನ್ ಚಿಟ್ ನೀಡಿದ್ದಾರೆ. ಜೊತೆಗೆ ಪಿಎಂ ಕೇರ್ಸ್‌ ನಿಧಿಗೆ ಚೀನಾದ ಕಂಪನಿಗಳಿಂದ ಕೋಟಿ ಕೋಟಿ ದೇಣಿಗೆ ಪಡೆಯಲು ಅವಕಾಶ ಕೊಟ್ಟಿದ್ದಾರೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT