ADVERTISEMENT

ಗೋವಾ ವಿಧಾನಸಭೆ ಚುನಾವಣೆ 2022: ಕಾಂಗ್ರೆಸ್, ಎನ್‌ಸಿಪಿ ಮೈತ್ರಿ ಸಾಧ್ಯತೆ

ಐಎಎನ್ಎಸ್
Published 15 ನವೆಂಬರ್ 2021, 10:29 IST
Last Updated 15 ನವೆಂಬರ್ 2021, 10:29 IST
ಗೋವಾ ಬೀಚ್,– ಸಾಂದರ್ಭಿಕ ಚಿತ್ರ
ಗೋವಾ ಬೀಚ್,– ಸಾಂದರ್ಭಿಕ ಚಿತ್ರ   

ಪಣಜಿ: ಮುಂದಿನ ವರ್ಷ ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಕೈಜೋಡಿಸುವ ಸಾಧ್ಯತೆ ದಟ್ಟವಾಗಿದೆ. ನವೆಂಬರ್ ಅಂತ್ಯಕ್ಕೆ ಈ ಬಗ್ಗೆ ಅಂತಿಮ ತೀರ್ಮಾನ ಹೊರಬೀಳಲಿದೆ ಎನ್ನಲಾಗಿದೆ.

ಗೋವಾ ಮಾಜಿ ಮುಖ್ಯಮಂತ್ರಿಯೂ ಆಗಿರುವ ಎನ್‌ಸಿಪಿಯ ಏಕೈಕ ಶಾಸಕ ಚರ್ಚಿಲ್ ಅಲೆಮಾವೊ ಅವರು, ‘ಎನ್‌ಸಿಪಿ ಹಾಗೂ ಕಾಂಗ್ರೆಸ್ ಜೊತೆಯಾಗಿ ಗೋವಾ ವಿಧಾನಸಭೆ ಚುನಾವಣೆ ಎದುರಿಸಲಿದೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರಕಲಿದೆ. ನಾವು 10 ಸ್ಥಾನಗಳನ್ನು ಕೇಳಿದ್ದೇವೆ‘ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನೂ ಕೂಡ ಈ ಮೈತ್ರಿಕೂಟಕ್ಕೆ ಸೇರಬೇಕು ಎಂದು ಕೇಳಿಕೊಂಡಿದ್ದೇವೆ. ನಾವು ಮೂವರು ಒಟ್ಟಾಗಿ ಹೋಗಬೇಕು ಎಂಬ ಆಸೆಯನ್ನು ರಾಜ್ಯದ ಹಲವು ಜನ ವ್ಯಕ್ತ‍ಪಡಿಸಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಗೋವಾ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಟಿಎಂಸಿ ತನ್ನ ಪ್ರಮುಖ ನಾಯಕರನ್ನು ಮೇಲಿಂದ ಮೇಲೆ ಗೋವಾಕ್ಕೆ ಕಳಿಸುತ್ತಿದೆ.

ಕಳೆದ ತಿಂಗಳು ಗೋವಾ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೊಡಂಕರ್, ಗೋವಾ ಎನ್‌ಸಿಪಿ ಮುಖ್ಯಸ್ಥ ಜೋಸ್ ಫಿಲಿಫ್ ಡಿಸೋಜಾ ಅವರು ಮೈತ್ರಿಯ ಬಗ್ಗೆ ಚರ್ಚೆ ನಡೆಸಿದ್ದರು. ಮುಂದಿನ ವರ್ಷ ಜನವರಿಯಲ್ಲಿ ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.