ADVERTISEMENT

Bharat Nyaya Yatra: ರಾಷ್ಟ್ರದ ಹಿತಕ್ಕಾಗಿ ಹೊಸ ಅಧ್ಯಾಯ: ಗೆಹಲೋತ್

ಪಿಟಿಐ
Published 27 ಡಿಸೆಂಬರ್ 2023, 16:03 IST
Last Updated 27 ಡಿಸೆಂಬರ್ 2023, 16:03 IST
ಅಶೋಕ್‌ ಗೆಹಲೋತ್
ಅಶೋಕ್‌ ಗೆಹಲೋತ್   

(ಸಂಗ್ರಹ ಚಿತ್ರ)

ಜೈಪುರ: ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹಮ್ಮಿಕೊಳ್ಳುತ್ತಿರುವ 'ಭಾರತ್‌ ನ್ಯಾಯ ಯಾತ್ರೆ' ರಾಷ್ಟ್ರದ ಹಿತಕ್ಕಾಗಿ ಹೊಸ ಅಧ್ಯಾಯ ಆಗಿರಲಿದೆ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ್‌ ಜೋಡೊ ಯಾತ್ರೆ ಯಶಸ್ಸಿನ ಬಳಿಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಣಿಪುರದ ಇಂಫಾಲ್‌ನಿಂದ ಮುಂಬೈವರೆಗೆ ‘ಭಾರತ್‌ ನ್ಯಾಯ ಯಾತ್ರೆ’ ಕೈಗೊಳ್ಳಲಿದ್ದಾರೆ.

ADVERTISEMENT

ಐತಿಹಾಸಿಕ ಭಾರತ್ ಜೋಡೊ ಯಾತ್ರೆ ಬಳಿಕ ರಾಹುಲ್ ಗಾಂಧಿ ಮುಂದಾಳತ್ವದಲ್ಲಿ ಭಾರತ್ ನ್ಯಾಯ ಯಾತ್ರೆ ನಡೆಯಲಿದೆ. ಈ ಯಾತ್ರೆಯು ನ್ಯಾಯದ ಸಂಕಲ್ಪದೊಂದಿಗೆ ಪ್ರಾರಂಭವಾಗಲಿದೆ. ಯಾತ್ರೆಗಾಗಿ ಇಡೀ ದೇಶವೇ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

2024ರ ಜನವರಿ 14ರಿಂದ ಆರಂಭವಾಗಲಿರುವ ಯಾತ್ರೆಯು 66 ದಿನಗಳವರೆಗೆ ನಡೆಯಲಿದೆ. ಮಾರ್ಚ್‌ 20ರಂದು ಯಾತ್ರೆ ಕೊನೆಗೊಳ್ಳಲಿದೆ. ಲೋಕಸಭೆ ಚುನಾವಣೆಗೆ ಮುನ್ನ ಕೈಗೊಳ್ಳಲಿರುವ ಯಾತ್ರೆಯಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯ ವಿಷಯಗಳು ಪ್ರಮುಖವಾಗಿ ಪ್ರಸ್ತಾಪವಾಗಲಿವೆ.

ರಾಹುಲ್ ಗಾಂಧಿ ಅವರ ಈ ಎರಡನೇ ಯಾತ್ರೆಯು ಪೂರ್ವದಿಂದ ಪಶ್ಚಿಮದವರೆಗೆ 14 ರಾಜ್ಯಗಳ 85 ಜಿಲ್ಲೆಗಳಲ್ಲಿ 6,200 ಕಿ.ಮೀ ಕ್ರಮಿಸಲಿದೆ. ಯಾತ್ರೆಯು ಮಣಿಪುರ, ನಾಗಾಲ್ಯಾಂಡ್‌, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್‌, ಒಡಿಶಾ, ಛತ್ತೀಸಗಢ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌ ಮತ್ತು ಮಹಾರಾಷ್ಟ್ರದಲ್ಲಿ ಸಂಚರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.