
ಗುವಾಹಟಿ: ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಗೌರವ್ ಗೊಗೊಯಿ ವಿರುದ್ಧ ಬಿಜೆಪಿಯು ’ಪಾಕಿಸ್ತಾನ ನಂಟಿನ’ ಆರೋಪ ಹೊರಿಸಿದ ಬೆನ್ನಲ್ಲೇ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಗೊಗೊಯಿ ಅವರನ್ನು ಮಂಗಳವಾರ ಭಾರತ-ಫಿಲಿಪ್ಪೀನ್ಸ್ ಫ್ರೆಂಡ್‌ಶಿಪ್ ಗ್ರೂಪ್‌ನ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದಾರೆ.
ಗೊಗೊಯಿ ಮತ್ತು ಕುಟುಂಬದ ವಿರುದ್ಧ ಪಾಕಿಸ್ತಾನ ನಂಟು ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
‘ವಿವಿಧ ದೇಶಗಳೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಉತ್ತಮ ಪಡಿಸಲು ಓಂ ಬಿರ್ಲಾ ಅವರು ಮಂಗಳವಾರ ಸಂಸತ್ ಸದಸ್ಯರನ್ನು ಒಳಗೊಂಡ ಹಲವು ಸಂಸದೀಯ ಗುಂಪುಗಳನ್ನು ರಚಿಸಿದ್ದಾರೆ. ಗೊಗೊಯಿ ನೇಮಕವು ಅಸ್ಸಾಂನಲ್ಲಿ ಏಪ್ರಿಲ್‌ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನೂ ಗಮನದಲ್ಲಿ ಇಟ್ಟುಕೊಂಡು ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.