ADVERTISEMENT

ಎಲ್ಲ ಸ್ವರೂಪದ ಕೋಮುವಾದದ ವಿರುದ್ಧ ಕಾಂಗ್ರೆಸ್‌ ನಿಲ್ಲಬೇಕು

ಪಿಟಿಐ
Published 13 ಫೆಬ್ರುವರಿ 2020, 19:19 IST
Last Updated 13 ಫೆಬ್ರುವರಿ 2020, 19:19 IST
ಜೈರಾಮ್‌ ರಮೇಶ್‌ 
ಜೈರಾಮ್‌ ರಮೇಶ್‌    

ಕೊಚ್ಚಿ: ‘ಕೋಮುವಾದವನ್ನು ವಿರೋಧಿಸುವ ಸಂದರ್ಭದಲ್ಲಿ ಮೃದು ಭಾವನೆಯನ್ನು ಹೊಂದಿರದೆ,ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಅನುಸರಿಸುತ್ತಿರುವ ಕೋಮುವಾದವನ್ನೂ ಕಾಂಗ್ರೆಸ್‌ ವಿರೋಧಿಸಬೇಕು’ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅಭಿಪ್ರಾಯಪಟ್ಟಿದ್ದಾರೆ.

‘ಆರ್‌ಎಸ್‌ಎಸ್‌ ಮಾದರಿ, ಬಿಜೆಪಿ ಮಾದರಿ ಕೋಮುವಾದವು ಪಿಎಫ್‌ಐ ಅಥವಾ ಜಮತ್‌–ಎ–ಇಸ್ಲಾಮಿ ಮಾದರಿಯ ಕೋಮುವಾದದಷ್ಟೇ ಭಾರತಕ್ಕೆ ಅಪಾಯಕಾರಿ. ಎಲ್ಲ ರೀತಿಯ ಕೋಮುವಾದದ ವಿರುದ್ಧ ಆಕ್ರಮಣಕಾರಿಯಾಗಿ ಹೋರಾಡುವುದೇ ನಿಜವಾದ ಜಾತ್ಯಾತೀತತೆ. ಈ ವಿಚಾರದಲ್ಲಿ ಆಯ್ಕೆ ಇರಬಾರದು. ಬಹುಸಂಖ್ಯಾತ ಕೋಮುವಾದದಷ್ಟೇ ಅಲ್ಪಸಂಖ್ಯಾತ ಕೋಮುವಾದವು ಅಪಾಯಕಾರಿ’ಎಂದಿದ್ದಾರೆ.

‘ಸಿಎಎ ಯಾರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ. ಆದರೆ ಪೌರತ್ವ ನೀಡುವಾಗ ಧರ್ಮದ ಆಧಾರದಲ್ಲಿ ನೀಡುವುದು ಸರಿಯಲ್ಲ. ಹೀಗಾಗಿ ನಾನು ಅದನ್ನು ವಿರೋಧಿಸುತ್ತೇನೆ’ ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.