ADVERTISEMENT

ಕಾಂಗ್ರೆಸ್‌ ನಾಯಕರ ಪ್ರೊಫೈಲ್‌ಗಳಲ್ಲಿ ತ್ರಿವರ್ಣ ಧ್ವಜ ಹಿಡಿದ ನೆಹರೂ ಚಿತ್ರ

ಪಿಟಿಐ
Published 3 ಆಗಸ್ಟ್ 2022, 10:35 IST
Last Updated 3 ಆಗಸ್ಟ್ 2022, 10:35 IST
ಜವಾಹರಲಾಲ್‌ ನೆಹರೂ ಅವರು ತ್ರಿವರ್ಣ ಧ್ವಜವನ್ನು ಹಿಡಿದಿರುವ ಚಿತ್ರ
ಜವಾಹರಲಾಲ್‌ ನೆಹರೂ ಅವರು ತ್ರಿವರ್ಣ ಧ್ವಜವನ್ನು ಹಿಡಿದಿರುವ ಚಿತ್ರ   

ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ತ್ರಿವರ್ಣ ಧ್ವಜವನ್ನು ಹಿಡಿದಿರುವ ಚಿತ್ರವು ಕಾಂಗ್ರೆಸ್‌ ಮತ್ತು ಪಕ್ಷದ ನಾಯಕರ ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ ಚಿತ್ರವಾಗಿ ಬದಲಾಗಿದೆ. 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರಾಷ್ಟ್ರದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ ಚಿತ್ರವನ್ನು ತ್ರಿವರ್ಣ ಧ್ವಜದ ಚಿತ್ರವನ್ನಾಗಿ ಬದಲಾಯಿಸಿಕೊಳ್ಳಲು ಕರೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್‌ ಈ ನಿರ್ಧಾರಕ್ಕೆ ಬಂದಿದೆ.

ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಹೆಚ್ಚಿನ ನಾಯಕರ ಟ್ವಿಟರ್‌ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ ಚಿತ್ರಗಳಲ್ಲಿ ರಾಷ್ಟ್ರ ಧ್ವಜ ಹಿಡಿದ ನೆಹರೂ ಫೋಟೊ ಕಾಣಿಸಿಕೊಂಡಿದೆ.

ನೆಹರೂ ಅವರು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದಿದ್ದಾರೆ. ಕಪ್ಪು ಬಿಳುಪಿನ ಈ ಚಿತ್ರವನ್ನು ಫೋಟೊಶಾಪ್‌ ಮೂಲಕ ವರ್ಣಮಯಗೊಳಿಸಲಾಗಿದೆ. ಈ ಚಿತ್ರವನ್ನು ಕಾಂಗ್ರೆಸ್‌ ನಾಯಕರು ಡಿಪಿಯನ್ನಾಗಿ ಇರಿಸಿಕೊಂಡಿದ್ದಾರೆ.

ADVERTISEMENT

'ನಮ್ಮ ತಿರಂಗ ನಮ್ಮ ರಾಷ್ಟ್ರದ ಹೆಮ್ಮೆ. ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ತಿರಂಗವಿದೆ' ಎಂದು ರಾಹುಲ್‌ ಗಾಂಧಿ ಡಿಪಿ ಜೊತೆಗೆ ಬರೆದಿದ್ದಾರೆ.

'ತ್ರಿವರ್ಣ ಧ್ವಜ ನಮ್ಮ ಹೃದಯದಲ್ಲಿದೆ. ನಮ್ಮ ರಕ್ತನಾಳದಲ್ಲಿ ಹರಿಯುತ್ತಿದೆ. ತ್ರಿವರ್ಣ ಧ್ವಜವನ್ನು ನಮ್ಮ ಒಗ್ಗಟ್ಟಿನ ಸಂದೇಶವನ್ನಾಗಿಸೋಣ. ನಮ್ಮ ಹೆಗ್ಗುರುತಾಗಿಸೋಣ. ಜೈ ಹಿಂದ್‌' ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.