ADVERTISEMENT

ಬೆಂಗಳೂರಿನ ರಮಾಡ ಹೋಟೆಲ್ ಬಳಿ ಧರಣಿ ಕುಳಿತ ದಿಗ್ವಿಜಯ ಸಿಂಗ್ ಬಂಧನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 4:29 IST
Last Updated 18 ಮಾರ್ಚ್ 2020, 4:29 IST
ದಿಗ್ವಿಜಯ ಸಿಂಗ್
ದಿಗ್ವಿಜಯ ಸಿಂಗ್   

ಬೆಂಗಳೂರು:ಬೆಂಗಳೂರಿನ ರಮಾಡ ಹೋಟೆಲ್ ಬಳಿಧರಣಿ ಕುಳಿತಿದ್ದಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಈ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದು ಅವರನ್ನು ಭೇಟಿ ಮಾಡಲು ಪೊಲೀಸರು ಅನುಮತಿ ನೀಡದ ಕಾರಣ ದಿಗ್ವಿಜಯ ಸಿಂಗ್ ಬುಧವಾರ ಬೆಳಗ್ಗೆ ಧರಣಿ ಕುಳಿತಿದ್ದರು.

ಮುಂಜಾನೆ ಬೆಂಗಳೂರಿಗೆ ಬಂದ ಸಿಂಗ್‌ನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬರ ಮಾಡಿಕೊಂಡಿದ್ದರು.

ADVERTISEMENT

ಮಧ್ಯಪ್ರದೇಶದ 21 ಶಾಸಕರುರಮಾಡ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ವಿಶ್ವಾಸಮತ ಸಾಬೀತುಪಡಿಸುವಂತೆ ಕಮಲ್‌ನಾಥ್‌ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಬಿಜೆಪಿ ಹಿರಿಯ ಮುಖಂಡ ಶಿವರಾಜ್‌ ಸಿಂಗ್‌ ಚೌಹಾಣ್‌ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.

ರಮಾಡ ಹೋಟೆಲ್ ಬಳಿ ಧರಣಿ ಕುಳಿತಿದ್ದ ದಿಗ್ವಿಜಯ ಸಿಂಗ್ ಅವರನ್ನುಪೊಲೀಸರು ಬಂಧಿಸಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಇದೀಗ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸಿಂಗ್ ಹೇಳಿದ್ದಾರೆ.

ಬಿಜೆಪಿ ಶಾಸಕ ಅರವಿಂದ ಭದೋರಿಯಾ ಮತ್ತು ಸಂಸದರೊಬ್ಬರನ್ನು ಹಿಡಿದಿರಿಸಲಾಗಿದೆ.ನಾನು ನನ್ನ ಶಾಸಕರನ್ನು, ರಾಜ್ಯಸಭೆಯ ಮತದಾರರೂ ಆದ, ನನ್ನ ಪಕ್ಷದ ಜನರನ್ನು ಯಾಕೆಭೇಟಿ ಮಾಡಲು ಬಿಡುವುದಿಲ್ಲ. ನಮ್ಮ ಮಧ್ಯೆ ಬಿಜೆಪಿ ಏನು ಮಾಡುತ್ತಿದೆ ಎಂದು ದಿಗ್ವಿಜಯ ಸಿಂಗ್ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.