ADVERTISEMENT

ರಾಹುಲ್ ಪಾದಯಾತ್ರೆ ಇಲ್ಲದ ರಾಜ್ಯಗಳಲ್ಲಿ ಕಾಂಗ್ರೆಸ್ ಯಾತ್ರೆ: ಜೈರಾಂ ರಮೇಶ್

ರಾಹುಲ್ ಗಾಂಧಿಯವರಿಂದ ಭಾರತ್ ಜೋಡೊ ಯಾತ್ರೆ

ಐಎಎನ್ಎಸ್
Published 2 ನವೆಂಬರ್ 2022, 5:28 IST
Last Updated 2 ನವೆಂಬರ್ 2022, 5:28 IST
ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಜೈರಾಂ ರಮೇಶ್
ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಜೈರಾಂ ರಮೇಶ್   

ಹೈದರಾಬಾದ್: ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ ಸಂಚರಿಸಲು ಸಾಧ್ಯವಾಗದ ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಯಾತ್ರೆ ನಡೆಸಲು ಕಾಂಗ್ರೆಸ್ ಮುಂದಾಗಿದೆ.

ಈ ಮೂಲಕ ಯಾತ್ರೆಯ ಆಶಯವನ್ನು ಎಲ್ಲ ರಾಜ್ಯಗಳ ಜನರಿಗೂ ತಲುಪಿಸುವುದು ಕಾಂಗ್ರೆಸ್ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಜೈರಾಂ ರಮೇಶ್ ತಿಳಿಸಿದ್ದಾರೆ.

ಯಾತ್ರೆ ಈಗಾಗಲೇ 55 ದಿನ ಪೂರೈಸಿದೆ. ಹೈದರಾಬಾದ್ ಮೂಲಕ ಯಾತ್ರೆ ಸಾಗಿದೆ. ಮುಂದೆ ತೆಲಂಗಾಣವನ್ನು ದಾಟಿ ಯಾತ್ರೆ ಸಾಗಲಿದೆ.

ADVERTISEMENT

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 12 ರಾಜ್ಯಗಳ ಮೂಲಕ ಭಾರತ್ ಜೋಡೊ ಯಾತ್ರೆ ಸಾಗುತ್ತಿದೆ. ಯಾತ್ರೆಗಾಗಿ ಗೊತ್ತುಪಡಿಸಿದ ಮಾರ್ಗ ಹೊರತುಪಡಿಸಿ, ಇತರ ರಾಜ್ಯಗಳಿಗೆ ಯಾತ್ರೆ ತೆರಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಲ್ಲಿ ಪ್ರತ್ಯೇಕವಾಗಿ ಯಾತ್ರೆ ನಡೆಸಿ ಜನರನ್ನು ಸಂಘಟಿಸಲು ಉದ್ದೇಶಿಸಲಾಗಿದೆ ಎಂದು ಜೈರಾಂ ರಮೇಶ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.