ADVERTISEMENT

ರಾಜೀವ್‌ ಗಾಂಧಿ ಜನ್ಮದಿನ: ಪಾಂಗೊಂಗ್ ಸರೋವರದ ತಟದಲ್ಲಿ ರಾಹುಲ್‌ ಪುಷ್ಪ ನಮನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಆಗಸ್ಟ್ 2023, 4:45 IST
Last Updated 20 ಆಗಸ್ಟ್ 2023, 4:45 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಲಡಾಖ್‌: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತಮ್ಮ ತಂದೆ ಮಾಜಿ ಪ್ರಧಾನಿ ದಿವಂಗತ ರಾಜೀವ್‌ ಗಾಂಧಿ ಅವರ ಜನ್ಮದಿನದ ಪ್ರಯುಕ್ತ ಲಡಾಖ್‌ನ  ಪಾಂಗೊಂಗ್ ಸರೋವರದ ತಟದಲ್ಲಿ ನಮನ ಸಲ್ಲಿಸಿದರು. 

ರಾಜೀವ್‌ ಗಾಂಧಿ ಅವರ 79ನೇ ಜನ್ಮದಿನವಾಗಿದೆ. ರಾಹುಲ್‌, ರಾಜೀವ್‌ ಗಾಂಧಿ ಅವರ ಫೋಟೊ ಎದುರು ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು.

ಆಗಸ್ಟ್‌ 20, 1944 ರಲ್ಲಿ ಜನಿಸಿದ್ದ ರಾಜೀವ್‌ ಗಾಂಧಿ ಅವರು ಭಾರತದ 7ನೇ ಪ್ರಧಾನ ಮಂತ್ರಿಯಾಗಿ 1984 ರಿಂದ 1989ರವರೆಗೆ ಕಾರ್ಯನಿರ್ವಹಿಸಿದ್ದರು.

ADVERTISEMENT

ರಾಹುಲ್‌ ಗಾಂಧಿ ಅವರು ಶನಿವಾರ ಲಡಾಖ್‌ನ ಪಾಂಗೊಂಗ್‌ ಸರೋವರಕ್ಕೆ ಬೈಕ್‌ ರೈಡ್‌ ನಡೆಸಿದ್ದು, ಆಗಸ್ಟ್‌25ರವರೆಗೆ ಲಡಾಖ್‌ನಲ್ಲಿ  ಇರಲಿದ್ದಾರೆ.

ಇದನ್ನೂ ಓದಿ: ಲಡಾಖ್‌ನ ಪಾಂಗೊಂಗ್ ಸರೋವರಕ್ಕೆ ರಾಹುಲ್‌ ಗಾಂಧಿ ಬೈಕ್‌ ರೈಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.