ADVERTISEMENT

ಸುನಂದಾ ಸಾವು ಆತ್ಮಹತ್ಯೆಯೂ ಅಲ್ಲ, ಕೊಲೆಯೂ ಅಲ್ಲ: ಆರೋಪ ಕೈಬಿಡಲು ಶಶಿ ತರೂರ್ ಮನವಿ

ಏಜೆನ್ಸೀಸ್
Published 24 ಮಾರ್ಚ್ 2021, 2:27 IST
Last Updated 24 ಮಾರ್ಚ್ 2021, 2:27 IST
ಶಶಿ ತರೂರ್‌
ಶಶಿ ತರೂರ್‌   

ನವದೆಹಲಿ: ಸುನಂದಾ ಪುಷ್ಕರ್ ಅವರ ಸಾವು ಆತ್ಮಹತ್ಯೆಯೂ ಅಲ್ಲ, ಕೊಲೆಯೂ ಅಲ್ಲವೆಂದು ಪುರಾವೆಗಳು ಖಚಿತಪಡಿಸಿವೆ. ಹಾಗಾಗಿ ತಮ್ಮ ವಿರುದ್ಧದ ಆರೋಪ ಕೈಬಿಡುವಂತೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಗುರುವಾರ ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ತರೂರ್‌ ವಿರುದ್ಧ ಐಪಿಸಿ ಸೆಕ್ಷನ್ 498ಎ (ಮಹಿಳೆಯನ್ನು ಗಾಯಗೊಳಿಸುವುದು/ ಅಥವಾ ಪ್ರಾಣಾಪಾಯ ತಂದೊಡ್ಡುವುದು) ಹಾಗೂ ಐಪಿಸಿ 306 (ಆತ್ಮಹತ್ಯೆಗೆ ಪ್ರಚೋದಿಸುವುದು) ಸಾಬೀತಾಗುವ ಯಾವುದೇ ಪುರಾವೆಗಳಿಲ್ಲ. ಸುನಂದಾ ಸಾವನ್ನು ಆಕಸ್ಮಿಕವೆಂದು ಪರಿಗಣಿಸಬೇಕು ಎಂದು ತರೂರ್ ಪರ ವಕೀಲ ಪಹ್ವಾ ಕೋರ್ಟ್‌ಗೆ ತಿಳಿಸಿದ್ದಾರೆ.

ಸುನಾಂದಾ ಪುಷ್ಕರ್‌ ಅವರ ಸಾವು ಆತ್ಮಹತ್ಯೆಯೂ ಅಲ್ಲ, ಕೊಲೆಯೂ ಅಲ್ಲವೆಂದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ ಎಂದು ಪಹ್ವಾ ವಾದಿಸಿದ್ದಾರೆ.

ADVERTISEMENT

ಮುಂದಿನ ವಿಚಾರಣೆಯನ್ನು ಮಾರ್ಚ್ 26 ನ್ಯಾಯಾಲಯ ಪುನರಾರಂಭಿಸಲಿದೆ.

2014ರ ಜನವರಿ 17ರಂದು ಸುನಂದಾ ಪುಷ್ಕರ್‌ ದೆಹಲಿಯ ಐಷಾರಾಮಿ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಶಶಿ ತರೂರ್‌ ಅವರ ಅಧಿಕೃತ ಬಂಗಲೆ ನವೀಕರಣ ನಡೆಯುತ್ತಿದ್ದರಿಂದ ದಂಪತಿ ಹೋಟೆಲ್‌ನಲ್ಲಿ ತಂಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.