ADVERTISEMENT

ಮಧ್ಯಪ್ರದೇಶ: ಮಹುನಲ್ಲಿ ‘ಜೈ ಬಾಪು, ಜೈ ಭೀಮ್‌, ಜೈ ಸಂವಿಧಾನ’ ರ್‍ಯಾಲಿ

ಪಿಟಿಐ
Published 26 ಜನವರಿ 2025, 15:18 IST
Last Updated 26 ಜನವರಿ 2025, 15:18 IST
<div class="paragraphs"><p>ಎಎಪಿ-ಕಾಂಗ್ರೆಸ್</p></div>

ಎಎಪಿ-ಕಾಂಗ್ರೆಸ್

   

(ಸಾಂದರ್ಭಿಕ ಚಿತ್ರ)

ಮಹು (ಮಧ್ಯಪ್ರದೇಶ): ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಜನ್ಮಸ್ಥಳ ಮಹುನಲ್ಲಿ ‘ಜೈ ಬಾಪು, ಜೈ ಭೀಮ್‌, ಜೈ ಸಂವಿಧಾನ’ ರ್‍ಯಾಲಿಯನ್ನು ಕಾಂಗ್ರೆಸ್‌ ಸೋಮವಾರ ಆಯೋಜಿಸಿದೆ.

ADVERTISEMENT

ಅಂಬೇಡ್ಕರ್‌ ಕುರಿತು ಅಮಿತ್‌ ಶಾ ಅವರು ರಾಜ್ಯಸಭೆಯಲ್ಲಿ ಆಡಿದ ಮಾತನ್ನು ಖಂಡಿಸುವುದು ಈ ರ್‍ಯಾಲಿಯ ಪ್ರಮುಖ ಉದ್ದೇಶ. ಇದರ ಜೊತೆಯಲ್ಲಿಯೇ ಸಾಮಾಜಿಕ ನ್ಯಾಯದ ಕುರಿತ ತನ್ನ ಸಂಕಥನವನ್ನು ಮುನ್ನೆಲೆಗೆ ತರುವುದು ಕೂಡ ಮತ್ತೊಂದು ಉದ್ದೇಶವಾಗಿದೆ. ‘ಸಂವಿಧಾನಕ್ಕೆ 75 ವರ್ಷ ತುಂಬಿದ ಈ ಸಂದರ್ಭದ ಕಾರಣದಿಂದಲೂ ಈ ರ್‍ಯಾಲಿ ಮಹತ್ವ ಪಡೆದುಕೊಂಡಿದೆ’ ಎಂದು ಪಕ್ಷ ಹೇಳಿದೆ.

ತಮ್ಮ ಅನಾರೋಗ್ಯದ ಕಾರಣ ಕರ್ನಾಟಕದ ಬೆಳಗಾವಿಯಲ್ಲಿ ನಡೆದ ರ್‍ಯಾಲಿಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಪಾಲ್ಗೊಂಡಿರಲಿಲ್ಲ. ಆದರೆ, ಸೋಮವಾರ ನಡೆಯುವ ರ್‍ಯಾಲಿಯಲ್ಲಿ ಅವರು ಭಾಗವಹಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪಕ್ಷದ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.