ADVERTISEMENT

‘ಚೀನಾದೊಂದಿಗೆ ಎಲ್ಲವೂ ಸರಿಯಾಗಿದೆ ಎಂದು ತೋರಿಸಿಕೊಳ್ಳಲು ಒತ್ತಾಯ’: ಕಾಂಗ್ರೆಸ್‌

ಪಿಟಿಐ
Published 29 ಆಗಸ್ಟ್ 2025, 15:48 IST
Last Updated 29 ಆಗಸ್ಟ್ 2025, 15:48 IST
   

ನವದೆಹಲಿ: ‘ಅಮೆರಿಕ ಮತ್ತು ಭಾರತದ ಹಳಸಿದ ಸಂಬಂಧದಿಂದ ಅನುಕೂಲ ಮಾಡಿಕೊಳ್ಳಲು ಯತ್ನಿಸುತ್ತಿರುವಂಥ ಚೀನಾದೊಂದಿಗೆ ನಮ್ಮ ಸಂಬಂಧವು ಚೆನ್ನಾಗಿಯೇ ಇದೆ ಎಂದು ತೋರಿಸಿಕೊಳ್ಳುವಂತೆ ‘ಒತ್ತಾಯ’ ಮಾಡಲಾಗುತ್ತಿದೆ’ ಎಂದು ಕಾಂಗ್ರೆಸ್‌ ಶುಕ್ರವಾರ ಆರೋಪಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಕಾಂಗ್ರೆಸ್‌ ಈ ರೀತಿ ಪ್ರತಿಕ್ರಿಯಿಸಿದೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ‘ಎಕ್ಸ್‌’ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ‘ಪ್ರಧಾನಿ ಅವರು ಚೀನಾಕ್ಕೆ ಭೇಟಿ ನೀಡುತ್ತಿರುವುದರ ಹಿಂದೆ ಯಾವುದೊ ಲೆಕ್ಕಾಚಾರ ಇದ್ದಂತಿದೆ. ಚೀನಾದೊಂದಿಗೆ ನಮ್ಮ ಸಂಬಂಧದಲ್ಲಿ ಎಲ್ಲವೂ ಸರಿಯಾಗಿಯೇ ಇದೆ ಎಂದು ತೋರಿಸಿಕೊಳ್ಳಲಾಗುತ್ತಿದೆ. ಇವೆಲ್ಲವೂ ಚೀನಾಕ್ಕೆ ಬೇಕಾದಂತೆಯೇ ಆಗುತ್ತಿದೆ’ ಎಂದಿದ್ದಾರೆ.

ADVERTISEMENT

‘ಪ್ರಧಾನಿ ಮೋದಿ ಅವರು ಮಣಿಪುರಕ್ಕೆ ಭೇಟಿ ನೀಡುತ್ತಾರೆ ಎಂದು ಅಲ್ಲಿನ ಜನರು ಬಹಳ ದಿನಗಳಿಂದ ಕಾಯುತ್ತಿದ್ದಾರೆ. ಆದರೆ, ಪ್ರಧಾನಿ ಅವರು ಮಾತ್ರ ಆ ಕಡೆ ಸುಳಿಯುತ್ತಿಲ್ಲ’ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.