ADVERTISEMENT

ಪಶ್ಚಿಮ ಬಂಗಾಳ: ಕಾಂಗ್ರೆಸ್‌ನಲ್ಲಿ ಮತ್ತೆ ಕಂಪನ, ರೋಹನ್ ಮಿತ್ರ ಪದತ್ಯಾಗ

ಪಿಟಿಐ
Published 14 ಜುಲೈ 2021, 10:33 IST
Last Updated 14 ಜುಲೈ 2021, 10:33 IST
ರೋಹನ್ ಮಿತ್ರ  -ಚಿತ್ರ: ರೋಹನ್‌ ಮಿತ್ರ ಟ್ವಿಟರ್
ರೋಹನ್ ಮಿತ್ರ -ಚಿತ್ರ: ರೋಹನ್‌ ಮಿತ್ರ ಟ್ವಿಟರ್   

ಕೋಲ್ಕತ್ತಾ: ಪಶ್ಚಿಮ ಬಂಗಾಳ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ಅಧೀರ್‌ ರಂಜನ್ ಚೌಧರಿಯೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಪ್ರಧಾನ ಕಾರ್ಯದರ್ಶಿ ರೋಹನ್ ಮಿತ್ರ ಅವರು ರಾಜ್ಯ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಸೋಮೆನ್ ಮಿತ್ರ ಅವರ ಪುತ್ರರಾದ ರೋಹನ್ ಮಿತ್ರ ಅವರು, ‘ತಮ್ಮ ನಾಯಕತ್ವದಲ್ಲಿ ಕೆಲಸ ಮಾಡಲು ಉತ್ತೇಜನ ದೊರೆಯದ ಕಾರಣ, ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಚೌಧರಿ ಅವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ನನ್ನ ಬಗ್ಗೆ ಮೊದಲಿನಿಂದಲೂ ನಿಮ್ಮ ವರ್ತನೆ ಸರಿಯಾಗಿರಲಿಲ್ಲ. ಈ ಹಿಂದೆ ನನ್ನ ತಂದೆ ಮತ್ತು ಇತರ ನಾಯಕರ ಬಗ್ಗೆ ನೀವು ಮತ್ತು ನಿಮ್ಮ ಗುಂಪು ಬಳಸಿದ ಭಾಷೆ ಬಂಗಾಳದ ಘಟಕಕ್ಕೆ ಹಾನಿ ಉಂಟು ಮಾಡುವಂತ್ತಿತ್ತು’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.