ADVERTISEMENT

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ: ಪ್ರಿಯಾಂಕಾ

ಉತ್ತರ ಪ್ರದೇಶ: ಕೇಂದ್ರ ಸಚಿವ ಅನುರಾಗ್ ಠಾಕೂರ್ ವಿಶ್ವಾಸ

ಪಿಟಿಐ
Published 29 ಡಿಸೆಂಬರ್ 2021, 18:00 IST
Last Updated 29 ಡಿಸೆಂಬರ್ 2021, 18:00 IST
ಫಿರೋಜಾಬಾದ್‌ನಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ‘ಶಕ್ತಿ ಸಂವಾದ’ ಕಾರ್ಯಕ್ರಮದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಯುವತಿಯರ ಜತೆ ಮಾತನಾಡಿದರು –ಪಿಟಿಐ ಚಿತ್ರ
ಫಿರೋಜಾಬಾದ್‌ನಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ‘ಶಕ್ತಿ ಸಂವಾದ’ ಕಾರ್ಯಕ್ರಮದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಯುವತಿಯರ ಜತೆ ಮಾತನಾಡಿದರು –ಪಿಟಿಐ ಚಿತ್ರ   

ವಾರಾಣಸಿ: ಕಳೆದ ಸಲದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪಡೆದಿದ್ದಕ್ಕಿಂತ ಹೆಚ್ಚು ಸ್ಥಾನಗಳನ್ನು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಉಪ ಉಸ್ತುವಾರಿ ಆಗಿರುವ ಅವರು, ಇಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಈ ಮಾತು ಹೇಳಿದ್ದಾರೆ.‘ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವು, ‘ಗೂಂಡಾರಾಜ್‌’ ವಿರುದ್ಧ ತೆಗೆದುಕೊಂಡ ಕಠಿಣ ಕ್ರಮಗಳು, ಅಭೂತಪೂರ್ವವಾದ ಅಭಿವೃದ್ಧಿ ಕೆಲಸಗಳು ಮತ್ತು ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳ ಕಾರಣ ಜನರಿಂದ ಉತ್ತಮ ಬಿಜೆಪಿ ಪರವಾದ ಅಲೆ ಸೃಷ್ಟಿಯಾಗಿದೆ’ ಎಂದು ಅವರು ಹೇಳಿದ್ದಾರೆ.

‘ನಾವು ರೈತರ ಒಳಿತಿಗಾಗಿ ಕೃಷಿ ಕಾನೂನುಗಳನ್ನು ಜಾರಿಗೆ ತಂದಿದ್ದೆವು. ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ, ಈ ಕಾನೂನುಗಳ ಕುರಿತು ನಮ್ಮಿಂದ ರೈತರ ಮನವೊಲಿಸಲಾಗಲಿಲ್ಲ. ಕೃಷಿ ನೀತಿಗಳನ್ನು ಹಿಂಪಡೆಯುವ ಮೊದಲು ನಾನು ಮೀರಠ್ ಮತ್ತು ಸಹಾರನ್‌ಪುರಕ್ಕೆ ಭೇಟಿ ನೀಡಿದ್ದೆ. ಆಗಲೂ ಕೂಡಾ ಬಿಜೆಪಿ ಬಗೆಗಿನ ಜನರ ವಿಶ್ವಾಸ ಕಡಿಮೆ ಆಗಿರಲಿಲ್ಲ. ಬಿಜೆಪಿ ರ‍್ಯಾಲಿಗಳಲ್ಲಿ ದೊಡ್ಡಮಟ್ಟದಲ್ಲಿ ಜನರು ಸೇರುತ್ತಿದ್ದಾರೆ’ ಎಂದಿದ್ದಾರೆ.

ADVERTISEMENT

‘ಮಹಿಳೆಯರ ವಿರುದ್ಧ ದೌರ್ಜನ್ಯವನ್ನು ಹುಟ್ಟುಹಾಕಿದ ಪಕ್ಷಗಳ ಜೊತೆ ಕಳೆದ ಬಾರಿ ಕಾಂಗ್ರೆಸ್‌ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿತ್ತು. ಅತೀಕ್‌ ಅಹ್ಮದ್‌ ಮತ್ತು ಮುಕ್ತರ್‌ ಅನ್ಸಾರಿ ಅವರಂಥ ಗೂಂಡಾಗಳನ್ನು ಪ್ರಿಯಾಂಕಾ ಗಾಂಧಿ ಒಪ್ಪಿಕೊಂಡಿರಲಿಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಯೋಗಿ ಆದಿತ್ಯನಾಥ ಅವರ ಆಡಳಿತದ ಮೇಲೆ ಮಹಿಳೆಯರಿಗೆ ಭರವಸೆ ಇರುವುದರಿಂದ ಅವರು ಕತ್ತಲಲ್ಲೂ ಮನೆಯಿಂದ ಹೊರಗೆ ಕಾಲಿಡುವ ಧೈರ್ಯ ಮಾಡುತ್ತಿದ್ದಾರೆ. ಮಾಫಿಯಾರಾಜ್‌ ವಿರುದ್ಧ ಆದಿತ್ಯನಾಥ ಅವರು ತೆಗೆದುಕೊಂಡ ಕ್ರಮಗಳಿಂದ ಉದ್ಯಮಿಗಳಿಗೂ ಆತ್ಮವಿಶ್ವಾಸ ಬಂದಿದೆ’ ಎಂದು ಅವರು ಹೇಳಿದ್ದಾರೆ.

‘ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿರುವ ಜೊತೆಗೆ ಉದ್ಯೋಗಗಳಿಗೆ ನೇಮಕಾತಿಯೂ ಪಾರರ್ಶಕವಾಗಿ ನಡೆಯುತ್ತಿದೆ.ಲಕ್ಷಾಂತರ ಜನರಿಗೆ ಪಕ್ಕಾ ಮನೆಗಳು, ವಿದ್ಯುತ್‌ ಸಂಪರ್ಕ, ಆಯುಷ್ಮಾನ್‌ ಭಾರತ ಯೋಜನೆ ಅಡಿ ಲಾಭ, ಉಚಿತ ಪಡಿತರ ದೊರಕುತ್ತಿವೆ. ಈ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲಿವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.