ADVERTISEMENT

ಪಂಜಾಬ್‌ ಚುನಾವಣೆ : ನಾಲ್ಕು ಪಾಲಿಕೆಗಳು ಕಾಂಗ್ರೆಸ್ ಪಾಲು, ಮೂರರಲ್ಲಿ ಮುನ್ನಡೆ

ಪಿಟಿಐ
Published 17 ಫೆಬ್ರುವರಿ 2021, 9:09 IST
Last Updated 17 ಫೆಬ್ರುವರಿ 2021, 9:09 IST
ಪಂಜಾಬ್‌ನ ಪಟಿಯಾಲ ಜಿಲ್ಲೆಯ ರಾಜ್‌ಪುರ ಪಟ್ಟಣದಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಜಯಗಳಿಸಿದ ಶಿರೋಮಣಿ ಅಕಾಲಿ ದಳದ ಅಭ್ಯರ್ಥಿ ಶುಭಪ್ರೀತ್ ಕೌರ್ ಗೆಲುವಿನ ಚಿಹ್ನೆ ತೋರಿದರು.
ಪಂಜಾಬ್‌ನ ಪಟಿಯಾಲ ಜಿಲ್ಲೆಯ ರಾಜ್‌ಪುರ ಪಟ್ಟಣದಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಜಯಗಳಿಸಿದ ಶಿರೋಮಣಿ ಅಕಾಲಿ ದಳದ ಅಭ್ಯರ್ಥಿ ಶುಭಪ್ರೀತ್ ಕೌರ್ ಗೆಲುವಿನ ಚಿಹ್ನೆ ತೋರಿದರು.   

ಚಂಡಿಗಡ: ಪಂಜಾಬ್‌ನಲ್ಲಿ ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ನಾಲ್ಕು ಮಹಾನಗರ ಪಾಲಿಕೆಗಳಲ್ಲಿ ಜಯಗಳಿಸಿದೆ ಮತ್ತು ಇತರ ಮೂರು ಮಹಾನಗರ ಪಾಲಿಕೆಗಳಲ್ಲಿ ಮುನ್ನಡೆ ಸಾಧಿಸಿದೆ.

ರಾಜ್ಯದ ಎಂಟು ಮಹಾನಗರ ಪಾಲಿಕೆಗಳ 2,302 ವಾರ್ಡ್‌ಗಳು ಮತ್ತು 109 ನಗರಸಭೆಗಳಿಗೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಬುಧವಾರ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಯಿತು.

ಆಡಳಿತಾರೂಢ ಕಾಂಗ್ರೆಸ್ ಪಕ್ಷ ಬತಿಂಡಾ, ಮೊಗಾ, ಹೋಶಿಯಾರ್‌ಪುರ ಮತ್ತು ಪಠಾಣ್‌ಕೋಟ್‌ ಮಹಾನಗರ ಪಾಲಿಕೆಗಳಲ್ಲಿ ಗೆಲುವು ಸಾಧಿಸಿದೆ. ಬಟಾಲ, ಕಪುರ್ತಲಾ ಮತ್ತು ಅಬೊಹರ ಪಾಲಿಕೆಗಳಲ್ಲಿ ಮುನ್ನಡೆ ಸಾಧಿಸಿದೆ.

ADVERTISEMENT

ರಾಜ್ಯ ಚುನಾವಣಾ ಆಯೋಗ ಮೊಹಾಲಿ ಮಹಾನಗರ ಪಾಲಿಕೆಯ ಎರಡು ಮತ ಗಟ್ಟೆಗಳಲ್ಲಿ ಮಂಗಳವಾರ ಮರು ಮತದಾನಕ್ಕೆ ಆದೇಶಿಸಿದ್ದರು. ಹೀಗಾಗಿ ಮೊಹಾಲಿ ಪಾಲಿಕೆಯ ಮತ ಎಣಿಕೆ ಕಾರ್ಯ ಗುರುವಾರ ನಡೆಯಲಿದೆ.

ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಫೆಬ್ರವರಿ 14 ರಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇಕಡಾ 70 ಕ್ಕೂ ಹೆಚ್ಚು ಮತದಾನವಾಗಿತ್ತು.

‌ಒಟ್ಟು 9222 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಅದರಲ್ಲಿ 2832 ಅಭ್ಯರ್ಥಿಗಳು ಪಕ್ಷೇತರರು, 2037 ಅಭ್ಯರ್ಥಿಗಳು ಆಡಳಿತಾ ರೂಢ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದರೆ, 1569 ಅಭ್ಯರ್ಥಿಗಳು ಶಿರೋಮಣಿ ಅಕಾಲಿದಳದ ಅಭ್ಯರ್ಥಿಗಳು. ಬಿಜೆಪಿಯ 1003, ಆಮ್ ಆದ್ಮಿ ಪಕ್ಷದ 1606 ಮತ್ತು ಬಿಎಸ್‌ಪಿಯ 160 ಅಭ್ಯರ್ಥಿಗಳು ಕಣದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.