ADVERTISEMENT

ಕೊರೊನಾ ಮತ್ತು ಚೀನಾ ಬಿಕ್ಕಟ್ಟು: ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‍ ಯತ್ನ-ನಖ್ವಿ

ಪಿಟಿಐ
Published 12 ಜುಲೈ 2020, 12:49 IST
Last Updated 12 ಜುಲೈ 2020, 12:49 IST
ಮುಖ್ತಾರ್ ಅಬ್ಬಾಸ್ ನಖ್ವಿ
ಮುಖ್ತಾರ್ ಅಬ್ಬಾಸ್ ನಖ್ವಿ   

ನವದೆಹಲಿ: ಕೊರೊನಾ ಮತ್ತು ಚೀನಾ ಜೊತೆಗಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾಂಗ್ರೆಸ್‍ ಪಕ್ಷ ರಾಜಕೀಯ ಲಾಭ ಹುಡುಕುತ್ತಿದ್ದು, ಆ ಪಕ್ಷದ ಮುಖಂಡರು ಆರ್ಥಿಕ ಸ್ಥಿತಿ, ದೇಶದ ಭದ್ರತೆ ಮತ್ತು ಸುಧಾರಣೆ ಕುರಿತು ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್‍ ನಖ್ವಿ ಭಾನುವಾರ ಆರೋಪಿಸಿದ್ದಾರೆ.

ಕಾಂಗ್ರೆಸ್‍ ನಾಯಕತ್ವದಡಿಯೇ ಭ್ರಷ್ಟಾಚಾರದ ಕಸ ಇರುವುದು ಸ್ಪಷ್ಟ. ಇದು, ಆ ಪಕ್ಷದಲ್ಲಿ ಗೊಂದಲ ಮೂಡಿಸಿದೆ. ಭ್ರಷ್ಟಾಚಾರದ ವ್ಯಾಪಾರಿಗಳೇ ಆದ ಅವರ ಹೇಳಿಕೆಗಳು ಏನೋ ತಪ್ಪಾಗಿದೆ ಎಂಬುದನ್ನು ಬಿಂಬಿಸುತ್ತಿವೆ ಎಂದು ಟೀಕಿಸಿದ್ದಾರೆ.

ವಿರೋಧಪಕ್ಷದ ಮೇಲೆ ವಾಗ್ದಾಳಿ ನಡೆಸಿರುವ ಅವರು, ಕಾಂಗ್ರೆಸ್‍ ಪಕ್ಷದ ಮುಖಂಡರಿಗೆ ಸೌರಪಾರ್ಕ್ ಮತ್ತು ಸೌರ ಸ್ಥಾವರ ಹಾಗೂ ಪಯಾಜ್‌‌ (ಈರುಳ್ಳಿ) ಮತ್ತು ಪಿಜ್ಜಾ ನಡುವಣ ವ್ಯತ್ಯಾಸವೂ ತಿಳಿದಿಲ್ಲ ಎಂದು ವ್ಯಂಗ್ಯವಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.