ADVERTISEMENT

ನೂತನ ಸಂಸತ್ ಭವನ ನಿರ್ಮಾಣದ ಅವಶ್ಯಕತೆಯಿಲ್ಲ: ಸುಪ್ರಿಯಾ ಸುಳೆ

ಪಿಟಿಐ
Published 22 ಫೆಬ್ರುವರಿ 2021, 5:41 IST
Last Updated 22 ಫೆಬ್ರುವರಿ 2021, 5:41 IST
ಸುಪ್ರಿಯ ಸುಳೆ
ಸುಪ್ರಿಯ ಸುಳೆ   

ಠಾಣೆ (ಮಹಾರಾಷ್ಟ್ರ): ‘ಕೇಂದ್ರ ಸರ್ಕಾರವು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ (ಎಂಪಿಲ್ಯಾಡ್‌) ಯೋಜನೆಯನ್ನು ಸ್ಥಗಿತಗೊಳಿಸಿತು. ಆದರೆ ನೂತನ ಸಂಸತ್ ಭವನ ನಿರ್ಮಿಸಲು ಮುಂದಾಗಿದೆ. ಈ ಕೋವಿಡ್‌ ಸಮಯದಲ್ಲಿ ಇದರ ಅವಶ್ಯಕತೆಯಿಲ್ಲ’ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಅಭಿಪ್ರಾಯ ಪಟ್ಟರು.

ಮಹಾರಾಷ್ಟ್ರದ ಅಂಬರ್‌ನಾಥ ಪಟ್ಟಣದಲ್ಲಿ ಭಾನುವಾರ ಸ್ಥಳೀಯ ಸಂಸ್ಥೆ ಚುನಾವಣಾ ರ‍್ಯಾಲಿಯನ್ನುದ್ಧೇಶಿಸಿ ಮಾತನಾಡಿದ ಅವರು,‘ ಸೆಂಟ್ರಲ್‌ ವಿಸ್ತಾ ಯೋಜನೆಗಾಗಿ ಸರ್ಕಾರ ₹800–₹1000 ಕೋಟಿ ಖರ್ಚು ಮಾಡುತ್ತಿದೆ. ಕೋವಿಡ್ ಪಿಡುಗಿನ ಸಂದರ್ಭದಲ್ಲಿ ಇದರ ಅವಶ್ಯಕತೆ ಇರಲಿಲ್ಲ. ಸಂಸದರ ನಿಧಿಯನ್ನು ಸ್ಥಗಿತಗೊಳಿಸಿ, ಆಸ್ಪತ್ರೆ ನಿರ್ಮಿಸಿದ್ದರೆ, ನಾವು ಸಂತೋಷವಾಗಿ ನಿಧಿಯನ್ನು ಬಿಟ್ಟುಕೊಡುತ್ತಿದ್ದೆವು’ ಎಂದರು.

ಕಳೆದ ವರ್ಷ ಕೇಂದ್ರ ಸರ್ಕಾರವು ಆರೋಗ್ಯ ವ್ಯವಸ್ಥೆ ಮತ್ತು ಕೋವಿಡ್‌ ಪರಿಣಾಮಕಾರಿ ನಿರ್ವಹಣೆಗಾಗಿ 2020–21, 2021–22ನೇ ಸಾಲಿನ ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.