ADVERTISEMENT

ಭೂಕುಸಿತಕ್ಕೆ ಮಾಂಸ ಭಕ್ಷಣೆ ಕಾರಣ: ಐಐಟಿ–ಮಂಡಿ ನಿರ್ದೇಶಕ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2023, 20:13 IST
Last Updated 7 ಸೆಪ್ಟೆಂಬರ್ 2023, 20:13 IST

ನವದೆಹಲಿ: ‘ಹಿಮಾಲಯ ಪ್ರದೇಶದಲ್ಲಿ ಭಾರಿ ಭೂಕುಸಿತ ಹಾಗೂ ಮೇಘಸ್ಫೋಟದಂತಹ ನೈಸರ್ಗಿಕ ವಿಪತ್ತು ಸಂಭವಿಸಲು ಮೂಕ ಪ್ರಾಣಿಗಳ ಹತ್ಯೆ ಹಾಗೂ ಮಾಂಸ ಭಕ್ಷಣೆಯೇ ಮೂಲ ಕಾರಣವಾಗಿದೆ’ ಎಂದು ಐಐಟಿ–ಮಂಡಿ ನಿರ್ದೇಶಕ ಲಕ್ಷ್ಮಿಧರ್ ಬೆಹೆರಾ ನೀಡಿರುವ ಹೇಳಿಕೆಯು ವಿವಾದಕ್ಕೆ ಗ್ರಾಸವಾಗಿದೆ.

ವಿದ್ಯಾರ್ಥಿಗಳನ್ನು ಉದ್ದೇಶಿಸಿ  ಬೆಹೆರಾ ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪ್ರಾಣಿಗಳು ಮತ್ತು ನಿಸರ್ಗದ ನಡುವೆ ಸಹಜೀವನ ಸಂಬಂಧವಿದೆ. ಆದರೆ, ಇದು ನಿಮ್ಮ ಕಣ್ಣಿಗೆ ಕಾಣುವುದಿಲ್ಲ. ಮೂಕಜೀವಿಗಳ ಹತ್ಯೆ ಮುಂದುವರಿದರೆ ನಿಸರ್ಗವೂ ಅವನತಿ ಕಾಣಲಿದೆ. ಜೊತೆಗೆ, ಹಿಮಾಚಲ ಪ್ರದೇಶವು ಅವನತಿ ಹೊಂದಲಿದೆ ಎಂದು ಹೇಳಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. 

ADVERTISEMENT

ಹಿಮಾಚಲ ಪ್ರದೇಶವು ಪದೇ ಪದೇ ನೈಸರ್ಗಿಕ ವಿಕೋಪಕ್ಕೆ ತುತ್ತಾಗುತ್ತಿದೆ. ಪ್ರಾಣಿಗಳ ಮೇಲೆ ನಡೆಯುತ್ತಿರುವ ಕ್ರೌರ್ಯ ಹಾಗೂ ಮಾಂಸ ಭಕ್ಷಣೆಯೇ ಇದಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಈ ವಿಡಿಯೊ ಚಿತ್ರೀಕರಣ ಯಾವಾಗ ನಡೆದಿದೆ ಎಂಬುದು ತಿಳಿದುಬಂದಿಲ್ಲ ಅಲ್ಲದೇ, ಐಐಟಿ–ಮಂಡಿ ಕೂಡ ವಿವಾದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.