ADVERTISEMENT

ಧರಣಿ ನಿರತ ಅಖಿಲೇಶ್ ಯಾದವ್ ಅವರನ್ನು ವಶಕ್ಕೆ ಪಡೆದ ಪೊಲೀಸರು

ರೈತರ ಪ್ರತಿಭಟನೆ ಬೆಂಬಲಿಸಿ ಕಾರ್ಯಕರ್ತರೊಂದಿಗೆ ಲಖನೌದಲ್ಲಿ ಪ್ರತಿಭಟನೆ

ಪಿಟಿಐ
Published 7 ಡಿಸೆಂಬರ್ 2020, 12:58 IST
Last Updated 7 ಡಿಸೆಂಬರ್ 2020, 12:58 IST
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್   

ಲಖನೌ: ನೂತನ ಕೃಷಿ ಕಾಯ್ದೆಗಳ ರದ್ದತಿಗಾಗಿ ರೈತರುನಡೆಸುತ್ತಿರುವ ಹೋರಾಟ ಬೆಂಬಲಿಸಿ ಸೋಮವಾರ ಭದ್ರತೆಯನ್ನು ಭೇದಿಸಿ ಪಕ್ಷದ ಕಾರ್ಯಕರ್ತರೊಂದಿಗೆ ರಸ್ತೆಯಲ್ಲೇ ಧರಣಿ ಕುಳಿತಿದ್ದ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಧರಣಿ ನಡೆಸುವುದನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಇಲ್ಲಿನ ಸಮಾಜವಾದಿ ಪಕ್ಷದ ಕೇಂದ್ರ ಕಚೇರಿ ಸುತ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಆ ಪೊಲೀಸ್ ರಕ್ಷಣೆಯನ್ನು ಭೇದಿಸಿ ಪಕ್ಷದ ಕಾರ್ಯಕರ್ತರೊಂದಿಗೆ ಅಖಿಲೇಶ್ ಯಾದವ್ ಧರಣಿ ನಡೆಸಲು ಮುಂದಾದರು. ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿ ಕರೆದೊಯ್ದರು.

‘ಹೊಸ ಕೃಷಿ ಕಾಯ್ದೆಗಳು ರೈತರಿಗೆ ನೆರವಾಗುವುದಾಗಿದ್ದರೆ, ಅವರು ಏಕೆ ಇಷ್ಟೆಲ್ಲ ಪ್ರತಿಭಟನೆ ಮಾಡುತ್ತಿದ್ದರು ? ಇಷ್ಟೆಲ್ಲ ಪ್ರತಿಭಟನೆ ನಡೆದರೂ ಸರ್ಕಾರ ಏಕೆ ತನ್ನ ನಿಲುವನ್ನು ಬದಲಿಸಿಕೊಂಡಿಲ್ಲ ? ರೈತರು ಹೊಸ ಕಾಯ್ದೆಗಳನ್ನು ತಿರಸ್ಕರಿಸುತ್ತಿರುವಾಗ, ಸರ್ಕಾರ ತಮ್ಮ ನಿಲುವಿನಿಂದ ಹಿಂದಕ್ಕೆ ಸರಿಯಬೇಕು‘ ಎಂದುಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.