ADVERTISEMENT

ಕೇರಳ: ಕೊರೊನಾ ಸೋಂಕಿನಿಂದ ನಾಲ್ಕು ತಿಂಗಳ ಮಗು ಸಾವು

ಏಜೆನ್ಸೀಸ್
Published 24 ಏಪ್ರಿಲ್ 2020, 4:13 IST
Last Updated 24 ಏಪ್ರಿಲ್ 2020, 4:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಲಾಪ್ಪುರಂ (ಕೇರಳ): ಕೊರೊನಾ ಸೋಂಕು ತಗುಲಿ ನಾಲ್ಕು ತಿಂಗಳ ಮಗು ಮೃತಪಟ್ಟಿರುವ ಘಟನೆ ಶುಕ್ರವಾರ ವರದಿಯಾಗಿದೆ.

ಮಗುವಿಗೆ ಕೊರೊನಾ ಸೋಂಕು ತಗುಲಿದ ಕಾರಣ ಇಲ್ಲಿನ ಕೋಜಿಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಗುರುವಾರ ದಾಖಲಿಸಲಾಗಿತ್ತು. ಮಗು ಜನಿಸಿದ ಒಂದು ತಿಂಗಳವರೆಗೂ ಆರೋಗ್ಯವಾಗಿತ್ತು. ಮೂರು ತಿಂಗಳಿಂದಮಗುವಿನಲ್ಲಿ ಹೃದಯದ ಸಮಸ್ಯೆ ಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿತ್ತು.

ಇದಲ್ಲದೆ, ಮಗು ನ್ಯುಮೋನಿಯಾದಿಂದ ಬಳಲುತ್ತಿತ್ತು ಎಂದು ಮಲಪ್ಪುರಂ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.ಪರಿಣಾಮ ಮಗುವಿನ ಕುಟುಂಬದ ಹಿನ್ನೆಲೆ ಹಾಗೂ ಕುಟುಂಬದ ಸದಸ್ಯರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.