ADVERTISEMENT

ಕೊರೊನಾ ವೈರಸ್‌ ಕುರಿತು ಹೀಗೂ ಮೂಡಿಸಬಹುದು ಜಾಗೃತಿ...

ಕೊರೊನಾ ವೈರಸ್‌ ಸೋಂಕು ಇಡೀ ಜಗತ್ತನ್ನು ಆವರಿಸಿದೆ. ಭಾರತವನ್ನೂ ಭಾದಿಸುತ್ತಿದೆ. ವೈರಸ್‌ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದೆ. ಈ ಮಧ್ಯೆ ಹಲವರು ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಬಗೆ ಬಗೆಯ ವೇಷ ಧರಿಸಿ, ವಿವಿಧ ರೀತಿಯಲ್ಲಿ ಇಂಥ ಪ್ರಯತ್ನಗಳು ನಡೆಯುತ್ತಿವೆ. ಈ ಕುರಿತ ಚಿತ್ರ ವಿವರಣೆ ಇಲ್ಲಿದೆ.

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 9:26 IST
Last Updated 18 ಏಪ್ರಿಲ್ 2020, 9:26 IST
ಮಹಾರಾಷ್ಟ್ರದ ಕರದ್‌ ಎಂಬಲ್ಲಿ ವ್ಯಕ್ತಿಯೊಬ್ಬರು ಕೊರೊನಾ ವೈರಸ್‌ ಮಾದರಿಯ ವಸ್ತುವನ್ನು ತಲೆಗೆ ಧರಿಸಿ ಓಡಾಡುವ ಮೂಲಕ ಜಾಗೃತಿ ಮೂಡಿಸಿದರು.
ಮಹಾರಾಷ್ಟ್ರದ ಕರದ್‌ ಎಂಬಲ್ಲಿ ವ್ಯಕ್ತಿಯೊಬ್ಬರು ಕೊರೊನಾ ವೈರಸ್‌ ಮಾದರಿಯ ವಸ್ತುವನ್ನು ತಲೆಗೆ ಧರಿಸಿ ಓಡಾಡುವ ಮೂಲಕ ಜಾಗೃತಿ ಮೂಡಿಸಿದರು.    
ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಯಮನ ವೇಷ ಧರಿಸಿ ಬಂದ ಆರೋಗ್ಯ ಕಾರ್ಯಕರ್ತರು ಮಾಸ್ಕ್‌ನ ಪ್ರಾಮುಖ್ಯತೆ ತಿಳಿಸುತ್ತಿರುವುದು.
ತಮಿಳುನಾಡಿನಲ್ಲಿ ಲಾಕ್‌ಡೌನ್‌ ಇದ್ದರೂ ಓಡಾಡುತ್ತಿದ್ದ ಮಹಿಳೆಯರಿಗೆ ತಿಳಿ ಹೇಳಿದ ಪೊಲೀಸ್‌
ಕೇರಳದಲ್ಲಿ ಲಾಕ್‌ಡೌನ್‌ ಉಲ್ಲಂಘಿಸಿ ಓಡಾಡುತ್ತಿದ್ದವರಿಗೆ ಕೊರೊನಾ ವೈರಸ್‌ನ ಚಿತ್ರವಿರುವ ಬಲೂನ್‌ ಅನ್ನು ನೀಡುವ ಮೂಲಕ ಬುದ್ಧಿ ಹೇಳಿದ ಪೊಲೀಸರು
ಭುವನೇಶ್ವರದಲ್ಲಿ ಸಾಮಾಜಿಕ ಅಂತರದ ಬಗ್ಗೆ ಕಲಾವಿದರೊಬ್ಬರಿಂದ ಮೌನ ಜಾಗೃತಿ.
ಪಶ್ಚಿಮ ಬಂಗಾಳದ ಬಿಹೃಮ್‌ನಲ್ಲಿ ಜಾಗೃತಿ ಮೂಡಿಸುವಲ್ಲಿ ತೊಡಗಿರುವ ವಿದೇಶಿ ನಾಗರಿಕ
ಚೆನ್ನೈನ ಮಾರುಕಟ್ಟೆಯೊಂದರಲ್ಲಿ ಬೊಂಬೆಗಳಿಗೆ ಮಾಸ್ಕ್‌ ತೊಡಿಸಿದ ವ್ಯಕ್ತಿಯೊಬ್ಬರು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.