ADVERTISEMENT

Covid-19 India Update: ದೇಶದಾದ್ಯಂತ ಸಾವಿನ ಸಂಖ್ಯೆ 6348

ಏಜೆನ್ಸೀಸ್
Published 5 ಜೂನ್ 2020, 8:38 IST
Last Updated 5 ಜೂನ್ 2020, 8:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ ದೇಶದಾದ್ಯಂತ ಕೊರೊನಾವೈರಸ್ ಸೋಂಕಿತರ ಸಂಖ್ಯೆ 226770ಕ್ಕೇರಿದ್ದು ಸಾವಿನ ಸಂಖ್ಯೆ 6348ಆಗಿದೆ. ಇಲ್ಲಿಯವರೆಗೆ 109462ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. 110960 ಸಕ್ರಿಯ ಪ್ರಕರಣಗಳಿವೆ.

ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 39944 ಆಗಿದ್ದು, ಇಲ್ಲಿಯವರೆಗೆ 2587 ಮಂದಿ ಸಾವಿಗೀಡಾಗಿದ್ದಾರೆ. ಅದೇ ವೇಳೆ ಗುಜರಾತಿನಲ್ಲಿ 4766 ಪ್ರಕರಣಗಳು ವರದಿಯಾಗಿದ್ದು, 1122 ಮಂದಿ ಮೃತಪಟ್ಟಿದ್ದಾರೆ.

ಕೇರಳದಲ್ಲಿ 832 ಮಂದಿಗೆ ಸೋಂಕು ತಗುಲಿದ್ದು ಸಾವಿನ ಸಂಖ್ಯೆ 11 ಆಗಿದೆ.ಉತ್ತರ ಪ್ರದೇಶದದಲ್ಲಿ 3324 ಸೋಂಕಿತರು ಇದ್ದಾರೆ. ಇಲ್ಲಿ ಸಾವಿನ ಸಂಖ್ಯೆ 229ಕ್ಕೆ ತಲುಪಿದೆ.

ADVERTISEMENT

ಪಶ್ಚಿಮ ಬಂಗಾಳದಲ್ಲಿ 3583 ಮಂದಿ ಸೋಂಕಿತರು, ಸಾವಿನ ಸಂಖ್ಯೆ 345 ಆಗಿದೆ.

ಜೂನ್ 10ರಂದು ಟಿವಿ ಧಾರವಾಹಿ ಶೂಟಿಂಗ್ ಆರಂಭವಾಗಲಿದೆ, ಯಾವುದೇ ಬಾಲ ನಟ/ನಟಿಯರನ್ನು ಶೂಟಿಂಗ್ ಸೆಟ್‌ಗೆ ಕರೆತರುವಂತಿಲ್ಲ. ಸ್ವಇಚ್ಛೆಯಿಂಜ ತಾವು ಶೂಟಿಂಗ್‌ನಲ್ಲಿ ಪಾಲ್ಗೊಂಡಿರುವುದಾಗಿ ಪತ್ರವೊಂದನ್ನು ಸಲ್ಲಿಸಿದ ನಂತರವೇ 65ಕ್ಕಿಂತ ಮೇಲ್ಪಟ್ಟ ಕಲಾವಿದರು ಪಾಲ್ಗೊಳ್ಳಬಹುದು ಎಂದು ಪಶ್ಚಿಮ ಬಂಗಾಳದ ಪಿಡಬ್ಲ್ಯುಡಿ, ಯುವಜನ ಮತ್ತು ಕ್ರೀಡಾಸಚಿವ ಅನೂಪ್ ಬಿಸ್ವಾಸ್ ಹೇಳಿದ್ದಾರೆ.

ದೆಹಲಿಯಲ್ಲಿ 1359 ಹೊಸ ಪ್ರಕರಣಗಳು ವರದಿಯಾಗಿತ್ತು, ಒಟ್ಟು ಪ್ರಕರಣಗಳ ಸಂಖ್ಯೆ 25004ಕ್ಕೇರಿದೆ. ಗುರುವಾರ 44 ಮಂದಿ ಸಾವಿಗೀಡಾಗಿದ್ದು ಒಟ್ಟು ಸಾವಿನ ಸಂಖ್ಯೆ 650 ಆಗಿದೆ.

ತೆಲಂಗಾಣದಲ್ಲಿ 127 ಹೊಸ ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 3147ಕ್ಕೇರಿದೆ. ಸಾವಿನ ಸಂಖ್ಯೆ 105.

ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ಒಂದೇ ದಿನ 285 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ3000 ದಾಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.