ADVERTISEMENT

Covid-19 India Updates| 24 ಗಂಟೆಗಳಲ್ಲಿ 311 ಸಾವು, 11,929 ಸೋಂಕು ಪ್ರಕರಣ

ಏಜೆನ್ಸೀಸ್
Published 14 ಜೂನ್ 2020, 6:25 IST
Last Updated 14 ಜೂನ್ 2020, 6:25 IST
ದೆಹಲಿ ಆಸ್ಪತ್ರೆಯೊಂದರ ದೃಶ್ಯ
ದೆಹಲಿ ಆಸ್ಪತ್ರೆಯೊಂದರ ದೃಶ್ಯ    

ನವದೆಹಲಿ: ದೇಶದಾದ್ಯಂತ ಕೋವಿಡ್ -19 ರೋಗದಿಂದ ಸಾವಿಗೀಡಾದವರ ಸಂಖ್ಯೆ 9,195ಆಗಿದೆ. ಕೇಂದ್ರ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಸಚಿವಾಲಯದ ಮಾಹಿತಿ ಪ್ರಕಾರಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 311ಮಂದಿ ಸಾವಿಗೀಡಾಗಿದ್ದಾರೆ. ಒಂದೇ ದಿನ 11,929 ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಜಾರ್ಖಂಡ್‌ನಲ್ಲಿ 54 ಮಂದಿಗೆ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 1,711 ಆಗಿದೆ. ಅದೇ ವೇಳೆ ಬಿಹಾರದಲ್ಲಿ193 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 6,289 ಆಗಿದೆ.

ಆಂಧ್ರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 5680 ಕ್ಕೇರಿದ್ದು ಈವರೆಗೆ 80 ಮಂದಿ ಸಾವಿಗೀಡಾಗಿದ್ದಾರೆ.ಬಿಹಾರದಲ್ಲಿ ಸೋಂಕಿತರ ಸಂಖ್ಯೆ 6103 ಆಗಿದ್ದು 36 ಮಂದಿ ಸಾವಿಗೀಡಾಗಿದ್ದಾರೆ.

ADVERTISEMENT

ದೆಹಲಿಯಲ್ಲಿ 22212 ಕ್ರಿಯಾಶೀಲ ಪ್ರಕರಣಗಳಿದ್ದು 36824 ಮಂದಿಗೆ ಸೋಂಕು ದೃಢಪಟ್ಟಿದೆ. ಇಲ್ಲಿಯವರೆಗೆ 1214 ಮಂದಿ ಸಾವಿಗೀಡಾಗಿದ್ದಾರೆ.

ಗುಜರಾತಿನಲ್ಲಿ ಸೋಂಕಿತರ ಸಂಖ್ಯೆ 22527 ಆಗಿದ್ದು 1415 ಮಂದಿ ಸಾವಿಗೀಡಾಗಿದ್ದಾರೆ.ಕೇರಳದಲ್ಲಿ 2322 ಮಂದಿಗೆ ಸೋಂಕು ದೃಢಪಟ್ಟಿದ್ದು ಇಲ್ಲಿಯವರೆಗೆ 19 ಮಂದಿ ಸಾವಿಗೀಡಾಗಿದ್ದಾರೆ.ಮಹಾರಾಷ್ಟ್ರದಲ್ಲಿ 49628 ಕ್ರಿಯಾಶೀಲ ಪ್ರಕರಣಗಳಿದ್ದು ಈವರೆಗೆ 3717 ಮಂದಿ ಮೃತಪಟ್ಟಿದ್ದಾರೆ.

ಮಧ್ಯಪ್ರದೇಶದಲ್ಲಿ 10433 ಸೋಂಕಿತರಿದ್ದು ಮೃತಪಟ್ಟವರ ಸಂಖ್ಯೆ 440 ಆಗಿದೆ. ತಮಿಳುನಾಡಿನಲ್ಲಿ 40698 ಮಂದಿಗೆ ಸೋಂಕು ತಗಲುಲಿದ್ದು ಇಲ್ಲಿಯವರೆಗೆ 367 ಮಂದಿ ಸಾವಿಗೀಡಾಗಿದ್ದಾರೆ.ಉತ್ತರ ಪ್ರದೇಶದಲ್ಲಿ 12616 ಮಂದಿಗೆ ಸೋಂಕಿತರು ಇದ್ದಾರೆ.365 ಮಂದಿ ಈವರೆಗೆ ಮೃತಪಟ್ಟಿದ್ದಾರೆ. ಅದೇ ವೇಳೆ ಪಶ್ಚಿಮ ಬಂಗಾಳದಲ್ಲಿ 10244 ಮಂದಿಗೆ ಸೋಂಕು ತಗುಲಿದ್ದು 451 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.