ADVERTISEMENT

ಕೋವ್ಯಾಕ್ಸಿನ್‌ಗೆ ಡಬ್ಲ್ಯುಎಚ್‌ಒ ಅನುಮೋದನೆ ಸಾಧ್ಯತೆ: ವರದಿ

ಪಿಟಿಐ
Published 13 ಸೆಪ್ಟೆಂಬರ್ 2021, 15:35 IST
Last Updated 13 ಸೆಪ್ಟೆಂಬರ್ 2021, 15:35 IST
   

ನವದೆಹಲಿ:ಹೈದರಾಬಾದ್‌ ಮೂಲದಭಾರತ್‌ ಬಯೋಟೆಕ್‌ ಅಭಿವೃದ್ಧಿ ಪಡಿಸಿರುವ ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್‌ಗೆ ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್‌ಒ) ಈ ತಿಂಗಳು ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಡಬ್ಲ್ಯುಎಚ್‌ಒ ಇದುವರೆಗೆ ಅಮೆರಿಕದ ಪ್ರಮುಖಔಷಧ ತಯಾರಿಕಾ ಕಂಪೆನಿಗಳಾದ ಜಾನ್ಸನ್‌ ಅಂಡ್‌ ಜಾನ್ಸನ್‌, ಮಾಡೆರ್ನಾ, ಚೀನಾದ ಸಿನೋಫಾರ್ಮ್‌, ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಮತ್ತುಫಿಜರ್-ಬಯೋಎನ್‌ಟೆಕ್‌ನ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಿದೆ.

ಕೊವ್ಯಾಕ್ಸಿನ್‌, ಭಾರತ ಔಷಧ ನಿಯಂತ್ರಕದಿಂದ ತುರ್ತು ಬಳಕೆ ಅನುಮತಿ ಪಡೆದಿರುವ ಆರನೇ ಲಸಿಕೆಯಾಗಿದೆ. ಇದನ್ನು ಕೊವಿಶೀಲ್ಡ್‌ ಮತ್ತು ಸ್ಪುಟ್ನಿಕ್‌ ವಿ ಜೊತೆಗೆ ದೇಶದಾದ್ಯಂತ ಲಸಿಕೆ ಅಭಿಯಾನದಲ್ಲಿ ಬಳಸಲಾಗುತ್ತಿದೆ.

ADVERTISEMENT

ʼಕೋವ್ಯಾಕ್ಸಿನ್‌ಗೆ ಈ ತಿಂಗಳು ಡಬ್ಲ್ಯುಎಚ್‌ಒದಿಂದ ಅನುಮೋದನೆ ಸಿಗುವ ಸಾಧ್ಯತೆ ಇದೆʼ ಎಂದುಅಧಿಕೃತ ಮೂಲಗಳು ಹೇಳಿವೆ.

ಡಬ್ಲ್ಯುಎಚ್‌ಒದಿಂದ ತುರ್ತು ಬಳಕೆ ಪಟ್ಟಿಗೆ(ಇಯುಎಲ್‌) ಅನುಮತಿ ಪಡೆಯಲು ಅಗತ್ಯವಿರುವ ಎಲ್ಲ ದಾಖಲೆಗಳನ್ನು ಭಾರತ್‌ ಬಯೋಟೆಕ್ ಜುಲೈ‌ 9ರಂದು ಕಳುಹಿಸಿದೆ. ಜಾಗತಿಕ ಆರೋಗ್ಯ ಸಂಸ್ಥೆಯು ಅದಕ್ಕೆ ಸಂಬಂಧಿಸಿದ ಪರಿಶೀಲನೆ ಪ್ರಕ್ರಿಯೆ ಆರಂಭಿಸಿದೆ ಎಂದು ಕೇಂದ್ರ ಸರ್ಕಾರವು ರಾಜ್ಯ ಸಭೆಯಲ್ಲಿ ಜುಲೈನಲ್ಲೇ ಮಾಹಿತಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.