ADVERTISEMENT

Covid-19 India Update | ತಮಿಳುನಾಡಿನಲ್ಲಿ ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ತಮಿಳುನಾಡಿನಲ್ಲಿ ಒಂದೇ ದಿನ 4329 ಪ್ರಕರಣ, ಮಹಾರಾಷ್ಟ್ರದಲ್ಲಿ 6364

ಏಜೆನ್ಸೀಸ್
Published 3 ಜುಲೈ 2020, 15:26 IST
Last Updated 3 ಜುಲೈ 2020, 15:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ತಮಿಳುನಾಡಿನಲ್ಲಿ ಶುಕ್ರವಾರ ಒಂದೇ ದಿನ 4329 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. 64 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷ ದಾಟಿದ್ದು, 102721 ತಲುಪಿದೆ.

4329 ಹೊಸ ಪ್ರಕರಣಗಳ ಪೈಕಿ 2,082 ಚೆನ್ನೈ ನಗರವೊಂದರಲ್ಲೇ ಪತ್ತೆಯಾಗಿವೆ. ಈವರೆಗೆ 58,378 ಮಂದಿ ಗುಣಮುಖರಾಗಿದ್ದಾರೆ. 42955 ಸಕ್ರಿಯ ಪ್ರಕರಣಗಳಿವೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 6364 ಹೊಸ ಪ್ರಕರಣ ದೃಢಪಟ್ಟಿದ್ದು, 198 ಸಾವು ಸಂಭವಿಸಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 192990ಕ್ಕೆ ಏರಿಕೆಯಾಗಿದ್ದು, ಈವರೆಗೆ 8376 ಮಂದಿ ಮೃತಪಟ್ಟಿದ್ದಾರೆ. 104687 ಮಂದಿ ಗುಣಮುಖರಾಗಿದ್ದು, 79,911 ಸಕ್ರಿಯ ಪ್ರಕರಣಗಳಿವೆ. ಮುಂಬೈಯ ಧಾರಾವಿಯಲ್ಲಿ 8 ಪ್ರಕರಣ ಪತ್ತೆಯಾಗಿದ್ದು, ಅಲ್ಲಿ ಸೋಂಕಿತರ ಸಂಖ್ಯೆ 2309 ತಲುಪಿದೆ. 551 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 84 ಸಾವು ಸಂಭವಿಸಿದೆ.

ADVERTISEMENT

ಬಿಹಾರದಲ್ಲಿ 24 ಗಂಟೆಗಳಲ್ಲಿ 519 ಹೊಸ ಪ್ರಕರಣಗಳು ಪತ್ತೆಯಾಗಿವೆ. ಸದ್ಯ ಅಲ್ಲಿ 2615 ಅಕ್ರಿಯ ಪ್ರಕರಣಗಳಿದ್ದು, 8211 ಮಂದಿ ಗುಣಮುಖರಾಗಿದ್ದಾರೆ.

ಕೇರಳದಲ್ಲಿ 211 ಹೊಸ ಪ್ರಕರಣಗಳು ದೃಢಪಟ್ಟಿವೆ. ಒಟ್ಟು ಸೋಂಕಿತರ ಸಂಖ್ಯೆ 4964ಕ್ಕೆ ಏರಿಕೆಯಾಗಿದ್ದು, ಸದ್ಯ 2098 ಸಕ್ರಿಯ ಪ್ರಕರಣಗಳಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಉತ್ತಾರಖಂಡದಲ್ಲಿ 64, ಪಂಜಾಬ್‌ನಲ್ಲಿ 153, ಮಣಿಪುರದಲ್ಲಿ 37, ಜಮ್ಮು–ಕಾಶ್ಮೀರದಲ್ಲಿ 170, ಗೋವಾದಲ್ಲಿ 94, ಹೊಸ ಪ್ರಕರಣಗಳು ದೃಢಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.