ADVERTISEMENT

ನಮಸ್ತೆ ಹಿನ್ನೆಲೆ: ಕೋವಿಡ್‌–19 ಭೀತಿಗೆ ಇಡೀ ಜಗತ್ತೇ 'ನಮಸ್ಕಾರ' ಮಾಡುತ್ತಿದೆ...

ಹಸ್ತಲಾಘವ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 5:34 IST
Last Updated 13 ಮಾರ್ಚ್ 2020, 5:34 IST
   

ಬೆಂಗಳೂರು: ಕೋವಿಡ್‌–19 ಭೀತಿ ಹಿನ್ನೆಲೆಯಲ್ಲಿ ವಿಶ್ವದ ನಾಯಕರು ಪರಸ್ಪರ ಹಸ್ತಲಾಘವ ಬದಲು ಭಾರತೀಯ ಸಂಸ್ಕೃತಿಯ ಗೌರವ ರೂಪವಾದ 'ನಮಸ್ಕಾರ‘ ಮಾಡುತ್ತಿದ್ದಾರೆ.

ಜಗತ್ತಿನ ವಿವಿಧ ಕಡೆಗಳಲ್ಲಿ ಪರಸ್ಪರಶುಭಾಶಯ ಕೋರುವಾಗ ಹಸ್ತಲಾಘವ ಮಾಡುವುದು, ಆಲಿಂಗನ, ಚುಂಬನದಂತಹ ಪಾಶ್ಚಿಮಾತ್ಯ ಶೈಲಿಯ ಪದ್ಧತಿಗಳು ಜನಪ್ರಿಯವಾಗಿದ್ದವು. ಇದೀಗ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಡೀ ಜಗತ್ತೇಭಾರತೀಯ ಸಂಸ್ಖೃತಿಯನಮಸ್ಕಾರಕ್ಕೆ ಮೊರೆ ಹೋಗಿದೆ.ತಲೆಬಾಗಿ ವಂದಿಸಿ ಶುಭಾಶಯ ಹೇಳುವ ಜಪಾನ್‌ ಶೈಲಿಯ ಪದ್ಧತಿಯು ಸಹ ಕೋವಿಡ್‌ ಬೀತಿ ಹಿನ್ನೆಲೆಯಲ್ಲಿ ಮುನ್ನೆಲೆಗೆ ಬಂದಿದೆ.

ಜಾಗತಿಕ ಮಟ್ಟದ ನಾಯಕರುಗಳು ಇದೀಗ ಭಾರತದ ಹಿಂದೂ ಪದ್ಧತಿಯಶುಭಾಶಯದ ಗೌರವ ರೂಪವಾದ ನಮಸ್ಕಾರ ಮಾಡುತ್ತಿದ್ದಾರೆ. ಕೋವಿಡ್‌ ಸೋಂಕು ಹರಡುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೂಡ ಪರಸ್ಪರಹಸ್ತಲಾಘವ, ಆಲಿಂಗನ ಮಾಡಿಕೊಳ್ಳುವುದು ಬೇಡ ಎಂದು ತಿಳಿಸಿದೆ.

ADVERTISEMENT

ಗುರುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಐರ್ಲೆಂಡ್‌ ಪ್ರದಾನಿ ಲಿಯೊ ವರ್ಡ್ಕಾರ್‌ ಭೇಟಿ ಮಾಡಿದ್ದರು. ಉಭಯ ನಾಯಕರು ಪರಸ್ಪರಶುಭಾಶಯಯ ಕೋರುವಾಗ ಹಿಂದೂ ಪದ್ಧತಿಯಂತೆಪರಸ್ಪರ ನಮಸ್ಕಾರ ಮಾಡಿದ್ದರು. ಈ ವೇಳೆ ಮಾತನಾಡಿದ ಟ್ರಂಪ್‌ ಇತ್ತೀಚೆಗೆ ನಾನು ಭಾರತಕ್ಕೆ ಭೇಟಿ ನೀಡಿದ್ದೆ, ಅಲ್ಲಿ ಶುಭಾಶಯ ಕೋರಲು ನಮಸ್ಕಾರ ಮಾಡುತ್ತಿದ್ದರು. ಆ ರೀತಿಯ ಶುಭಾಶಯ ತುಂಬಾ ಸುಲಭವಾದುದು ಎಂದು ಟ್ರಂಪ್‌ ನಮಸ್ತೆ ಮಾಡಿ ಮಾಧ್ಯಮಗಳಿಗೆತೋರಿಸಿದ್ದರು.

ಭಾರತೀಯ ಶೈಲಿಯ ನಮಸ್ಕಾರ ಜಾಗತಿಕವಾಗಿ ಟ್ರೆಂಡ್‌ ಆಗಿದೆ. ವಿಶ್ವದಾದ್ಯಂತ ಸಿನಿಮಾ ನಟರು, ರಾಜಕೀಯ ನಾಯಕರು, ಉದ್ಯಮಿಗಳು, ವ್ಯಾಪಾರಸ್ಥರು, ಕ್ರೀಡಾಪಟುಗಳು ನಮಸ್ಕಾರ ಮಾಡುವ ಮೂಲಕ ಅಭಿವಂದನೆ ಹೇಳುತ್ತಿದ್ದಾರೆ.

ಫ್ರಾನ್ಸ್ ಅಧ್ಯಕ್ಷ ಮಾರ್ಕನ್ ಅವರು, ಸ್ಪೇನ್ ದೇಶದ ರಾಜಮನೆತನದವರನ್ನು ವಿಮಾನ ನಿಲ್ದಾಣದಲ್ಲಿ ನಮಸ್ಕಾರ ಮಾಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್‌ ಆಗಿದೆ.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರು ತಮ್ಮ ದೇಶದ ಜನರಿಗೆ ಕೈಕುಲುಕುವ ಬದಲು ಭಾರತೀಯರಂತೆ ನಮಸ್ಕಾರ ಮಾಡಿ ಎಂದು ಕರೆ ಕೊಟ್ಟಿದ್ದಾರೆ.

ನಮಸ್ಕಾರ...

ಭಾರತೀಯ ಹಿಂದೂ ಪರಂಪರೆಯಲ್ಲಿ 'ನಮಸ್ಕಾರ' ಶುಭಾಶಯದ ಒಂದು ಗೌರವ ರೂಪ. ಭಾರತೀಯ ಉಪಖಂಡದಲ್ಲಿ ನಮಸ್ಕಾರ ಮಾಡಿ ಶುಭಾಶಯ ಹೇಳುವುದು ಪ್ರಚಲಿತದಲ್ಲಿದೆ. ಸಾಮಾನ್ಯವಾಗಿ ಭಾರತೀಯರು ಅಭಿವಂದನೆ ಮತ್ತು ಬೀಳ್ಕೊಡುಗೆ ಸಂದರ್ಭದಲ್ಲೂ ನಮಸ್ಕಾರ ಮಾಡುತ್ತಾರೆ.

ಸ್ವಲ್ಪ ಬಗ್ಗಿ, ಎರಡು ಕೈಗಳನ್ನು ಒಂದಕ್ಕೊಂದು ಒತ್ತಿ, ಅಂಗೈಗಳು ಸ್ಪರ್ಶಿಸಿ ಮತ್ತು ಬೆರಳುಗಳು ಮೇಲ್ಮುಖವಾಗಿ ಇದ್ದು, ಹೆಬ್ಬೆರಳುಗಳನ್ನು ಎದೆಗೆ ಹತ್ತಿರವಿರಿಸಿ ನಮಸ್ಕಾರ ಹೇಳಲಾಗುತ್ತದೆ. ಈ ವಿಧಾನವನ್ನು ಅಂಜಲಿ ಮುದ್ರೆಅಥವಾಪ್ರಣಾಮಾಸನಎಂದು ಹೇಳಲಾಗುತ್ತದೆ. ಭರತನ ನಾಟ್ಯಶಾಸ್ತ್ರದಲ್ಲೂ ನಮಸ್ಕಾರದ ಉಲ್ಲೇಖವನ್ನು ಕಾಣಬಹುದು.

ನಮಸ್ಕಾರ ಪದಕ್ಕೆ ವಂದನೆ, ನಮನ, ಪ್ರಣಾಮ, ಶರಣು ಎಂಬ ಪರ್ಯಾಯ ಶಬ್ಧಗಳು ಇವೆ.

(ನಮಸ್ಕಾರದ ಮಾಹಿತಿ ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.