ADVERTISEMENT

ಮಾಸ್ಕ್ ಬಿಸಾಡುವ ಮುನ್ನ 3 ದಿನ ಕಟ್ಟಿಡಿ: ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 19:32 IST
Last Updated 23 ಜುಲೈ 2020, 19:32 IST
ದೆಹಲಿಯ ಅಂಗಡಿಯೊಂದರ ಮುಂದೆ ಮಾಸ್ಕ್ ಧರಿಸಿ ಕುಳಿತಿರುವ ಭದ್ರತಾ ಸಿಬ್ಬಂದಿ –ಪಿಟಿಐ ಚಿತ್ರ
ದೆಹಲಿಯ ಅಂಗಡಿಯೊಂದರ ಮುಂದೆ ಮಾಸ್ಕ್ ಧರಿಸಿ ಕುಳಿತಿರುವ ಭದ್ರತಾ ಸಿಬ್ಬಂದಿ –ಪಿಟಿಐ ಚಿತ್ರ   

ನವದೆಹಲಿ: ಕೋವಿಡ್‌ ಹರಡದಂತೆ ತಡೆಯಲು ಬಳಸುವ ಮಾಸ್ಕ್‌ ಮತ್ತು ಗ್ಲೌಸ್‌ಗಳನ್ನು ವಿಲೇವಾರಿ ಮಾಡಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಬಳಸಿದ ಮಾಸ್ಕ್‌ಗಳನ್ನು ಬಿಸಾಡುವ ಮುನ್ನ ಮೂರು ದಿನ ಸಂಗ್ರಹಿಸಿ ಇಡಬೇಕು ಎಂದು ಮಂಡಳಿಯು ಸೂಚಿಸಿದೆ. ಇದು ಮನೆಗಳು, ಸಾರ್ವಜನಿಕ ಕಚೇರಿಗಳು, ಅಂಗಡಿಗಳು–ಮಾಲ್‌ಗಳಿಗೂ ಅನ್ವಯವಾಗುತ್ತದೆ

* ಬಳಸಿದ ಮಾಸ್ಕ್‌ ಮತ್ತು ಗ್ಲೌಸ್‌‌ಗಳನ್ನು ಬಿಸಾಡುವ ಮುನ್ನ ಕತ್ತರಿಸಬೇಕು. ಪೇಪರ್‌ ಬ್ಯಾಗ್‌ನಲ್ಲಿ ತುಂಬಿ, ಗಾಳಿಯಾಡದಂತೆ ಕಟ್ಟಬೇಕು. 72 ಗಂಟೆ/3 ದಿನ ಅದನ್ನು ಸಂಗ್ರಹಿಸಿ ಇಡಬೇಕು. ನಂತರ ಕಸ ಸಂಗ್ರಹಕಾರರಿಗೆ ನೀಡಬೇಕು

* ಕಚೇರಿಗಳಲ್ಲಿ, ಮಾಲ್‌ಗಳಲ್ಲಿ ಮತ್ತು ಅಂಗಡಿಗಳಲ್ಲಿ ಬಳಸಿ ಬಿಸಾಡುವ ಮಾಸ್ಕ್‌/ಗ್ಲೌಸ್‌ಗಳನ್ನು ಇದೇ ರೀತಿ ವಿಲೇವಾರಿ ಮಾಡಬೇಕು

ADVERTISEMENT

* ಈ ಮಾಸ್ಕ್‌/ಗ್ಲೌಸ್‌ಗಳನ್ನು ಸಾಮಾನ್ಯ ಘನತ್ಯಾಜ್ಯದ ಜತೆಯಲ್ಲೇ ವಿಲೇವಾರಿ ಮಾಡಬಹುದು

* ಕೋವಿಡ್‌ ರೋಗಿಗಳು ಬಳಸಿದ ನೀರಿನ ಬಾಟಲ್‌, ಜ್ಯೂಸ್‌ನ ಬಾಟಲ್‌/ಟೆಟ್ರಾಪ್ಯಾಕ್‌ ಮತ್ತು ಉಳಿದ ಆಹಾರವನ್ನು ಸಾಮಾನ್ಯ ಘನತ್ಯಾಜ್ಯದ ಜತೆಯಲ್ಲೇ ವಿಲೇವಾರಿ ಮಾಡಬೇಕು. ಇವನ್ನು ಹಳದಿ ಬಣ್ಣದ ಕವರ್‌ನಲ್ಲಿ ಹಾಕಬಾರದು

* ಮಾಸ್ಕ್‌/ಗ್ಲೌಸ್‌ ಇರುವ ಸಾಮಾನ್ಯ ಘನತ್ಯಾಜ್ಯದ ಬ್ಯಾಗ್‌ಗಳಿಗೆ ವೈರಾಣು ನಿವಾರಕ ದ್ರಾವಣವನ್ನು ಸಿಂಪಡಿಸಬೇಕು

* ಕೋವಿಡ್‌ ರೋಗಿಗಳು ಬಳಸಿದ ಮಾಸ್ಕ್‌, ಗ್ಲೌಸ್‌, ಪಿಪಿಇ ಕಿಟ್‌, ಟಾಯ್ಲೆಟ್‌ರೋಲ್‌ಗಳನ್ನು ಹಳದಿ ಬಣ್ಣದ ಬ್ಯಾಗ್‌ನಲ್ಲಿ ವಿಲೇವಾರಿ ಮಾಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.