ADVERTISEMENT

ದೇಶದಲ್ಲಿ ಸೋಂಕಿನಿಂದ ಗುಣಮುಖಗೊಂಡವರ ಪ್ರಮಾಣ ಶೇ.51ಕ್ಕೆ: ಸಾರ್ವಕಾಲಿಕ ದಾಖಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜೂನ್ 2020, 8:30 IST
Last Updated 15 ಜೂನ್ 2020, 8:30 IST
ಕೋವಿಡ್‌ ಪೀಡಿತ ವ್ಯಕ್ತಿಯೊಬ್ಬರ ಆರೈಕೆಯಲ್ಲಿ ತೊಡಗಿರುವ ವೈದ್ಯರು (ಪ್ರಾತಿನಿಧಿಕ ಚಿತ್ರ– ರಾಯಿಟರ್ಸ್‌)
ಕೋವಿಡ್‌ ಪೀಡಿತ ವ್ಯಕ್ತಿಯೊಬ್ಬರ ಆರೈಕೆಯಲ್ಲಿ ತೊಡಗಿರುವ ವೈದ್ಯರು (ಪ್ರಾತಿನಿಧಿಕ ಚಿತ್ರ– ರಾಯಿಟರ್ಸ್‌)    
""

ಬೆಂಗಳೂರು: ದೇಶದಲ್ಲಿ ಕೋವಿಡ್‌ ರೋಗದಿಂದ ಗುಣಮುಖರಾದವರ ಪ್ರಮಾಣ ಇದೇ ಮೊದಲಬಾರಿಗೆ ಶೇ.51ಕ್ಕಿಂತಲೂ ಹೆಚ್ಚಾಗಿದೆ. ಇದು ಸಾರ್ವಕಾಲಿಕ ದಾಖಲೆಯೂ ಹೌದು.

ಕೇಂದ್ರದ ಆರೋಗ್ಯ ಇಲಾಖೆಯ ವೆಬ್‌ಸೈಟ್‌ನ ಅಂಕಿ ಅಂಶಗಳ ಪ್ರಕಾರ ಸದ್ಯ ಭಾರತದಲ್ಲಿ3,32,424 ಮಂದಿ ಸೋಂಕಿತರಿದ್ದಾರೆ. ಈ ಪೈಕಿ1,69,797 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನು1,53,106 ಮಂದಿ ಸೋಂಕಿನಿಂದಾಗಿ ಇನ್ನೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತದಲ್ಲಿ ಕೊರೊನಾ ವೈರಸ್‌– ಅಂಕಿ ಸಂಖ್ಯೆಗಳಲ್ಲಿ

ಈ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಕೊರೊನಾ ವೈರಸ್‌ನಿಂದಗುಣಮುಖರಾಗುತ್ತಿರುವವರ ಪ್ರಮಾಣ ಏರುಗತಿಯಲ್ಲಿದ್ದು, ಅದು ಶೇ. 51ಕ್ಕಿಂತಲೂ ಅಧಿಕವಿದೆ. ಇದು ಆಶಾದಾಯಕ ಬೆಳವಣಿಗೆ.

ADVERTISEMENT

ಇನ್ನು ದೇಶದಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ9,520ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.