ADVERTISEMENT

ಪುಣೆ: ಸೋಂಕಿನ ತೀವ್ರತೆ ಹೆಚ್ಚಿಸುವ ಕೊರೊನಾ ವೈರಸ್‌ನ ಮತ್ತೊಂದು ರೂಪಾಂತರ ಪತ್ತೆ

ಪಿಟಿಐ
Published 9 ಜೂನ್ 2021, 9:31 IST
Last Updated 9 ಜೂನ್ 2021, 9:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುಣೆ: ಕೊವಿಡ್–19 ಸೋಂಕಿನ ತೀವ್ರತೆಯನ್ನು ಹೆಚ್ಚಿಸಬಲ್ಲ ಕೊರೊನಾ ವೈರಸ್‌ನ ಮತ್ತೊಂದು ರೂಪಾಂತರವನ್ನು ಪುಣೆಯಲ್ಲಿರುವ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ)’ಯ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಬ್ರಿಟನ್‌ ಮತ್ತು ಬ್ರೆಜಿಲ್‌ನಿಂದ ಬಂದಿರುವ ಇಬ್ಬರು ಪ್ರಯಾಣಿಕರಲ್ಲಿ ಈ ರೂಪಾಂತರ ವೈರಸ್ ಪತ್ತೆಯಾಗಿದೆ.

ಬಿ.1.1.28.2 (B.1.1.28.2) ಹೆಸರಿನ ಈ ರೂಪಾಂತರ ವೈರಸ್‌ನ ಎರಡು ಮಾದರಿಗಳು ಮಾತ್ರ ಈವರೆಗೆ ಭಾರತೀಯ ಪ್ರಯೋಗಾಲಯಗಳಲ್ಲಿ ಪತ್ತೆಯಾಗಿವೆ.

ADVERTISEMENT

2020ರ ಡಿಸೆಂಬರ್‌ನಲ್ಲಿ ಬ್ರಿಟನ್‌ನಿಂದ ಮರಳಿದ್ದ ಪ್ರಯಾಣಿಕನ ಮೂಗಿನ, ಗಂಟಲಿನ ದ್ರವದ ಮಾದರಿಯಿಂದ ಈ ರೂಪಾಂತರವನ್ನು ಪ್ರತ್ಯೇಕಿಸಲಾಗಿತ್ತು. 2021ರ ಜನವರಿಯಲ್ಲಿ ಬ್ರೆಜಿಲ್‌ನಿಂದ ಬಂದ ಪ್ರಯಾಣಿಕನಲ್ಲಿ ರೂಪಾಂತರ ವೈರಸ್ ಪತ್ತೆಯಾಗಿತ್ತು.

ಈ ರೂಪಾಂತರವು ಕಳೆದ ವರ್ಷ ಬ್ರೆಜಿಲ್‌ನಲ್ಲಿ ಸಾರ್ಸ್‌–ಕೊವ್–2 ಜೀನೋಮಿಕ್ ಅಧ್ಯಯನದ ವೇಳೆ ಮೊದಲು ಪತ್ತೆಯಾಗಿತ್ತು.

‘ವಿಶ್ವ ಆರೋಗ್ಯ ಸಂಸ್ಥೆಯು ಅಧ್ಯಯನಕ್ಕೆ ಆಸಕ್ತಿವಹಿಸಿರುವ ರೂಪಾಂತರಗಳಲ್ಲಿ ಇದೂ ಒಂದಾಗಿರುವ ಕಾರಣ ಇದನ್ನು ಪತ್ತೆಹಚ್ಚಿರುವುದಕ್ಕೆ ಹೆಚ್ಚು ಮಹತ್ವವಿದೆ’ ಎಂದು ಅಧ್ಯಯನ ವರದಿಯ ಲೇಖಕ, ಐಸಿಎಂಆರ್–ಎನ್‌ಐವಿ ಪುಣೆಯ ಪ್ರಗ್ಯಾ ಯಾದವ್ ಹೇಳಿದ್ದಾರೆ.

‘ಈ ರೂಪಾಂತರದಿಂದ ಸೋಂಕಿನ ತೀವ್ರತೆ ಹೆಚ್ಚಾಗುವುದು ಮತ್ತು ತಟಸ್ಥಗೊಳಿಸುವಿಕೆಯ ಸಾಧ್ಯತೆ ಬಗ್ಗೆ ನಾವು ಅಧ್ಯಯನ ನಡೆಸಿದ್ದೇವೆ. ಈಗಾಗಲೇ ಅಭಿವೃದ್ಧಿಪಡಿಸಲಾಗಿರುವ ಲಸಿಕೆಗಳ ಪರಿಣಾಮಕಾರಿತ್ವವನ್ನು ಪರೀಕ್ಷಿಸುವ ಅಗತ್ಯವನ್ನು ಇದು ಸೂಚಿಸುತ್ತದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.