ADVERTISEMENT

ಜಮಾತ್‌‌ನಲ್ಲಿ ಪಾಲ್ಗೊಂಡ ರಾಷ್ಟ್ರಗಳ ಪಟ್ಟಿ, ಬೆಂಗಳೂರಿನ ಮಂದಿರದಲ್ಲಿ ನೋಟೀಸ್

ಏಜೆನ್ಸೀಸ್
Published 3 ಏಪ್ರಿಲ್ 2020, 9:40 IST
Last Updated 3 ಏಪ್ರಿಲ್ 2020, 9:40 IST
ದೆಹಲಿಯ ಜಾಮಿಯಾ ಮಸೀದಿಗೆ ಪೊಲೀಸ್ ಬಂದೋಬಸ್ತ್
ದೆಹಲಿಯ ಜಾಮಿಯಾ ಮಸೀದಿಗೆ ಪೊಲೀಸ್ ಬಂದೋಬಸ್ತ್   
""
""
""

ನವದೆಹಲಿ: ದೆಹಲಿಯಲ್ಲಿ ನಡೆದತಬ್ಲಿಗಿ ಜಮಾತ್‌‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವದ 39 ರಾಷ್ಟ್ರಗಳಿಂದ 993 ಮಂದಿ ಭಾಗವಹಿಸಿರುವ ಪಟ್ಟಿ ದೊರೆತಿದೆ.

ಇದರಲ್ಲಿ ಅತಿ ಹೆಚ್ಚು ಮಂದಿ ಇಂಡೋನೇಷಿಯಾದಿಂದಲೇಭಾಗವಹಿಸಿದ್ದು 379 ಮಂದಿ ಆಗಮಿಸಿದ್ದರು ಎಂದು ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ.

ಪಟ್ಟಿಯ ಪ್ರಕಾರ ಅಲ್ಜೀರಿಯಾ 7, ಸೌದಿ ಅರೇಬಿಯಾ 9 ಆಸ್ಟ್ರೇಲಿಯಾ 1, ಬಾಂಗ್ಲಾದೇಶ 110 , ಇರಾನ್ 22, ಕಜಕಿಸ್ತಾನ 24, ಮಲೇಷಿಯಾ 75 , ಮಯನ್ಮಾರ್ 63 ಫಿಲಿಫೈನ್ಸ್ 10, ಕತಾರ್ 3, ಶ್ರೀಲಂಕಾ 33, ಥೈಲ್ಯಾಂಡ್ 65
ಉಳಿದ ರಾಷ್ಟ್ರಗಳ ವಿವರ ಈ ಕೆಳಗೆ ನೀಡಲಾಗಿದೆ.

ADVERTISEMENT

ದೆಹಲಿಯ ಜಾಮಿಯಾ ಮಸೀದಿಯಲ್ಲಿ ಕೊರೊನಾ ಕಾರಣ ಬಿಕೋ ಎನ್ನುತ್ತಿದೆ. ಕೊರೊನಾ ಸೋಂಕು ಕಾರಣ ಇಲ್ಲಿ ಯಾವುದೇ ಪ್ರಾರ್ಥನೆ ಸಲ್ಲಿಸದಂತೆ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ
ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ದೆಹಲಿಯ ಜಾಮಿಯಾ ಮಸೀದಿ

ಇದೇ ಸಮಯದಲ್ಲಿ ಕೊರೊನಾ ಸೋಂಕು ಕಾರಣ ಬೆಂಗಳೂರಿನ ಶಿವಾಜಿನಗರದ ಪ್ರಾರ್ಥನಾ ಮಂದಿರದಲ್ಲಿ ನೋಟೀಸ್ ಅಂಟಿಸಲಾಗಿದ್ದು, ಶುಕ್ರವಾರ ಪ್ರಾರ್ಥನೆಯನ್ನು ರದ್ದುಪಡಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಧರ್ಮಗುರು ಮತ್ತು ಕೆಲವೇ ಸದಸ್ಯರನ್ನು ಹೊರತುಪಡಿಸಿ ಇತರರು ತಮ್ಮ ಮನೆಯಿಂದಲೇ ಪ್ರಾರ್ಥನೆ ಸಲ್ಲಿಸಬೇಕೆಂದು ವಿನಂತಿಸಲಾಗಿದೆ.

ಬೆಂಗಳೂರಿನ ಶಿವಾಜಿನಗರದ ಮಸೀದಿಯಲ್ಲಿ ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ನೋಟೀಸ್ ಅಂಟಿಸಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.