ADVERTISEMENT

ಮಧ್ಯಪ್ರದೇಶ: ಮಣ್ಣು ಕುಸಿದು ದಂಪತಿ ಸಾವು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2025, 9:25 IST
Last Updated 17 ಫೆಬ್ರುವರಿ 2025, 9:25 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಶಹಡೋಲ್: ಮಧ್ಯಪ್ರದೇಶದ ಶಹಡೋಲ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಅಕ್ರಮವಾಗಿ ಕಲ್ಲಿದ್ದಲು ಅಗೆಯುತ್ತಿದ್ದ ವೇಳೆ ಮಣ್ಣು ಕುಸಿದು ದಂಪತಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಭಾನುವಾರ ಸಂಜೆ ಬುಧರ್ ಪೊಲೀಸ್ ಠಾಣೆ ವ್ಯಾಪ್ತಿಯ ಧಂಗವಾನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸೋನ್‌ ನದಿಯ ದಡದಲ್ಲಿ ಜನರ ಗುಂಪೊಂದು ಅಕ್ರಮವಾಗಿ ಕಲ್ಲಿದ್ದಲು ಅಗೆಯುತ್ತಿದ್ದಾಗ ಅವರ ಮೇಲೆ ಮಣ್ಣು ಕುಸಿದಿದೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿದ್ದು, ಒಬ್ಬ ಪುರುಷ ಮತ್ತು ಮಹಿಳೆ ಅವಶೇಷಗಳ ಅಡಿಯಲ್ಲಿ ‌ಹೂತು ಹೋಗಿರುವುದು ಕಂಡುಬಂದಿದೆ ಎಂದು ಬುಧರ್‌ ಪೊಲೀಸ್‌ ಠಾಣೆಯ ಉಸ್ತುವಾರಿ ಸಂಜಯ್‌ ಜೈಸ್ವಾಲ್‌ ತಿಳಿಸಿದ್ದಾರೆ.

ಓಂಕಾರ್‌ ಯಾದವ್‌ (40) ಮತ್ತು ಅವರ ಪತ್ನಿ ಪಾರ್ವತಿ (38) ಮೃತರು. ಸ್ಥಳದಲ್ಲಿದ್ದ ಇತರ ಮೂವರು ಅವಘಡದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ನದಿಯ ದಡದಲ್ಲಿ ಅಕ್ರಮವಾಗಿ ಕಲ್ಲಿದ್ದಲು ಅಗೆಯುವ ಚಟುವಟಿಕೆಯಿಂದಾಗಿ ಬಾರಿ ಪ್ರಮಾಣದ ಮಣ್ಣು ಸಂಗ್ರಹವಾಗಿತ್ತು. ಅವಘಡದಲ್ಲಿ ಹೆಚ್ಚಿನ ಸಾವುನೋವುಗಳು ಸಂಭವಿಸಿದೆಯೇ ಎಂದು ಪತ್ತೆ ಹಚ್ಚಲು ಸ್ಥಳದಲ್ಲಿ ಶೋಧ ನಡೆಸಲಾಗುತ್ತಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ರಾಮ್‌ಜಿ ಶ್ರೀವಾಸ್ತವ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.