ADVERTISEMENT

ದೀಪಕ್‌ ತಲ್ವಾರ್‌ ವಿರುದ್ಧ ಇ.ಡಿ ತನಿಖೆ: ದೆಹಲಿ ಕೋರ್ಟ್‌ ಒಪ್ಪಿಗೆ

ಪಿಟಿಐ
Published 15 ಮಾರ್ಚ್ 2019, 19:46 IST
Last Updated 15 ಮಾರ್ಚ್ 2019, 19:46 IST
 ದೀಪಕ್ ತಲ್ವಾರ್‌
ದೀಪಕ್ ತಲ್ವಾರ್‌   

ನವದೆಹಲಿ: ಫ್ರಾನ್ಸ್‌ನ ಏರ್‌ಬಸ್‌ ಇಂಡಸ್ಟ್ರೀಯಿಂದ ಇಂಡಿಯನ್‌ ಏರ್‌ಲೈನ್ಸ್‌ಗೆ 43 ವಿಮಾನಗಳನ್ನು ಖರೀದಿಸುವ ಒಪ್ಪಂದದಲ್ಲಿ ಲಾಬಿ ನಡೆಸಿದ್ದ ಆರೋಪಿ ದೀಪಕ್ ತಲ್ವಾರ್‌ನನ್ನು ಜಾರಿ ನಿರ್ದೇಶನಾಲಯ (ಇ.ಡಿ) ವಿಚಾರಣೆಗೆ ಒಳಪಡಿಸಲು ದೆಹಲಿ ಕೋರ್ಟ್‌ ಶುಕ್ರವಾರ ಒಪ್ಪಿಗೆ ನೀಡಿದೆ.

ವಿಮಾನಗಳ ಖರೀದಿ ಒಪ್ಪಂದಕ್ಕೆ ಸಂಬಂಧಿಸಿ ಮತ್ತೊಂದು ಪ್ರಕರಣದಲ್ಲೂ ಆರೋಪಿಯಾಗಿರುವ ತಲ್ವಾರ್‌ ನ್ಯಾಯಾಂಗ ಬಂಧನದಲ್ಲಿದ್ದು, ಸದ್ಯ ತಿಹಾರ್‌ ಜೈಲಿನಲ್ಲಿಡಲಾಗಿದೆ. ಆತನನ್ನು ಸಿಬಿಐ ದುಬೈನಲ್ಲಿ ಬಂಧಿಸಿ ಕರೆ ತಂದಿತ್ತು.

ವಿದೇಶದ ಖಾಸಗಿ ವಿಮಾನ ಕಂಪನಿಯ ಪರವಾಗಿ ಲಾಬಿ ಮಾಡಿ, ಇಂಡಿಯನ್‌ ಏರ್‌ಲೈನ್ಸ್‌ಗೆ ನಷ್ಟ ಉಂಟು ಮಾಡಿದ ಪ್ರಕರಣದಲ್ಲಿ ದೀಪಕ್‌ ತಲ್ವಾರ್‌ನನ್ನು ವಿಚಾರಣೆ ನಡೆಸಬೇಕಿದೆ. ಇದಕ್ಕೆ ಒಪ್ಪಿಗೆ ನೀಡಬೇಕೆಂದು ಇ.ಡಿಯಿಂದ ದೆಹಲಿ ಕೋರ್ಟ್‌ಗೆ ಗುರುವಾರ ಅರ್ಜಿ ಸಲ್ಲಿಸಲಾಗಿತ್ತು.

ADVERTISEMENT

ವಿಮಾನಗಳ ಖರೀದಿಯಲ್ಲಿ ಅಕ್ರಮ ಹಣ ವರ್ಗಾವಣೆಯಂತಹ ಕ್ರಿಮಿನಲ್‌ ಆಪಾದನೆ ಎದುರಿಸುತ್ತಿರುವ ಆರೋಪಿಯನ್ನು ಇ.ಡಿ ವಶಕ್ಕೆ ನೀಡುವಂತೆ ಇ.ಡಿ ಪರವಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳಾದ ಡಿ.ಪಿ.ಸಿಂಗ್‌ ಮತ್ತು ನಿರೇಶ್‌ ರಾಣಾ ಅವರು ‌ಕೋರ್ಟ್‌ಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.