ADVERTISEMENT

2012 ಗಲಭೆ ಪ್ರಕರಣ: ಕೇಜ್ರಿವಾಲ್‌ ದೋಷಮುಕ್ತ

ಪಿಟಿಐ
Published 3 ಡಿಸೆಂಬರ್ 2018, 13:13 IST
Last Updated 3 ಡಿಸೆಂಬರ್ 2018, 13:13 IST
ಅರವಿಂದ್‌ ಕೇಜ್ರಿವಾಲ್‌
ಅರವಿಂದ್‌ ಕೇಜ್ರಿವಾಲ್‌   

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಮನೆಯ ಎದುರು ಗಲಭೆ ಸೃಷ್ಟಿಸಿದ ಆರೋಪದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಇತರೆ ಆರು ಮಂದಿಯನ್ನು ದೆಹಲಿ ಕೋರ್ಟ್‌ ದೋಷಮುಕ್ತಗೊಳಿಸಿದೆ.

ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸಮರ್‌ ವಿಶಾಲ್‌ ಅವರು2012ರಲ್ಲಿ ನಡೆದ ಈ ಪ್ರಕರಣದ ತೀರ್ಪುನ್ನು ಸೋಮವಾರ ಪ್ರಕಟಿಸಿದರು. ಅರವಿಂದ್‌ ಕೇಜ್ರಿವಾಲ್‌, ಘನಶ್ಯಾಮ್‌, ಮಹೇಶ್‌, ದೀಪಕ್‌ ಚಾಬ್ರ, ರಂಜಿತ್‌ ಬಿಶತ್, ಅಮಿತ್‌ ಕುಮಾರ್‌ ಮತ್ತು ಗೌತಮ್‌ ಕುಮಾರ್ ಸಿಂಗ್‌ ಆರೋಪದಿಂದ ಮುಕ್ತಗೊಂಡಿದ್ದಾರೆ.

2012ರ ಆಗಸ್ಟ್‌ 26ರಂದು ಮನಮನೋಹನ್‌ ಸಿಂಗ್‌ ಅವರ ಮನೆ ಎದುರು ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕೇಜ್ರಿವಾಲ್‌ ಮತ್ತು ಇತರರು ಪ್ರತಿಭಟನೆ ನಡೆಸಿದ್ದರು. ಆ ಪ್ರತಿಭಟನೆ ಹಿಂಸಾತ್ಮಕಸ್ವರೂಪಕ್ಕೆ ತಿರುಗಿತ್ತು.ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹಲವು ಬಾರಿ ಟಿಯರ್ ಗ್ಯಾಸ್ ಬಳಸಲಾಗಿತ್ತು. ಬ್ಯಾರಿಕೇಡ್ ಸೇರಿದಂತೆ ಹಲವು ಪರಿಕರಗಳಿಗೆ ಹಾನಿಯಾಗಿತ್ತು.

ADVERTISEMENT

ಈ ಸಂಬಂಧಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೇಜ್ರಿವಾಲ್‌ ಮತ್ತು ಇತರೆ ಆರು ಮಂದಿಯ ವಿರುದ್ಧ ದೆಹಲಿ ಪೊಲೀಸರು ಸೆಕ್ಷನ್‌ 147 (ಗಲಭೆ) 148 (ಮಾರಕಾಸ್ತ್ರಗಳಿಂದ ದೊಂಬಿ ಗಲಾಟೆ) ಮತ್ತು 149 (ಅಕ್ರಮವಾಗಿ ಗುಂಪುಗೂಡುವಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.