ADVERTISEMENT

ಶಹಬಾಜ್‌ ಷರೀಫ್ ಬಂಧನ ಅವಧಿ ವಿಸ್ತರಣೆ

ಪಿಟಿಐ
Published 16 ಅಕ್ಟೋಬರ್ 2018, 18:57 IST
Last Updated 16 ಅಕ್ಟೋಬರ್ 2018, 18:57 IST

ಲಾಹೋರ್‌: ₹1,400 ಕೋಟಿ ಮೊತ್ತದ ವಸತಿ ಹಗರಣದ ಆರೋಪ ಎದುರಿಸುತ್ತಿರುವ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ (ಪಿಎಂಎನ್‌–ಎಲ್‌) ಮುಖ್ಯಸ್ಥರೂ ಆಗಿರುವ ವಿರೋಧ ಪಕ್ಷದ ನಾಯಕ ಶಹಬಾಜ್‌ ಷರೀಫ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳ ಕಾಲ ವಿಸ್ತರಿಸಲಾಗಿದೆ.

ಆಶಿಯಾನ್‌–ಎ–ಇಕ್ಬಾಲ್ ವಸತಿ ಹಗರಣಕ್ಕೆ ಸಂಬಂಧಿಸಿದಂತೆ ಷರೀಫ್ ಅವರನ್ನು ಅಕ್ಟೋಬರ್‌ 5ರಂದು ಬಂಧಿಸಲಾಗಿತ್ತು. ಪಂಜಾಬ್ ಪ್ರಾಂತ್ಯದ ಮಾಜಿ ಮುಖ್ಯಮಂತ್ರಿಯೂ ಆದ ಅವರನ್ನು ಬಿಗಿ ಭದ್ರತೆ ನಡುವೆ ಮಂಗಳವಾರ ಕೋರ್ಟ್‌ಗೆ ಹಾಜರುಪಡಿಸಲಾಯಿತು.

‘ವಸತಿ ಯೋಜನೆಯ ಗುತ್ತಿಗೆ ಒಪ್ಪಂದದಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗಿಲ್ಲ’ ಎಂದು ನ್ಯಾಯಾಧೀಶ ನಜಾಮುಲ್‌ ಹಸನ್ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.