ADVERTISEMENT

ಕುತುಬ್‌ ಮಿನಾರ್‌: ವಿಗ್ರಹಗಳ ಪ್ರತಿಷ್ಠಾಪನೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2021, 13:51 IST
Last Updated 9 ಡಿಸೆಂಬರ್ 2021, 13:51 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕುತುಬ್‌ ಮಿನಾರ್‌ ಸಂಕೀರ್ಣದಲ್ಲಿ ಹಿಂದೂ ಮತ್ತು ಜೈನರ ಆರಾಧನಾ ಮೂರ್ತಿಗಳನ್ನು ಪುನರ್‌ ಪ್ರತಿಷ್ಠಾಪಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.

ಮಹಮ್ಮದ್‌ ಘೋರಿ ಆಡಳಿತದಲ್ಲಿ ಸೇನಾ ನಾಯಕನಾಗಿದ್ದ ಕುತುಬುದ್ದೀನ್‌ ಐಬಕ್‌ 27 ದೇವಾಲಯಗಳನ್ನು ಭಾಗಶಃ ಧ್ವಂಸ ಮಾಡಿದ್ದು, ಇವುಗಳ ಸಾಮಗ್ರಿಗಳನ್ನು ಬಳಸಿ ಕುತುಬ್‌ ಮಿನಾರ್‌ ಸಂಕೀರ್ಣದೊಳಗೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಜೈನ ತೀರ್ಥಂಕರ ವೃಷಭದೇವ ಮತ್ತು ಹಿಂದೂ ದೇವರು ವಿಷ್ಣುವಿನ ಮೂರ್ತಿಯನ್ನು ಸಂಕೀರ್ಣದಲ್ಲಿ ಪುನರ್‌ ಪ್ರತಿಷ್ಠಾಪಿಸಬೇಕು ಎಂದು ಕೋರಲಾಗಿದೆ.

ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಧೀಶೆ ನೇಹಾ ಶರ್ಮಾ ‘ಭಾರತವು ಸಂಪನ್ನ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿದೆ. ಇಲ್ಲಿ ಅಸಂಖ್ಯಾತ ರಾಜವಂಶಸ್ಥರು ಆಳ್ವಿಕೆ ನಡೆಸಿದ್ದಾರೆ. ಹಿಂದೆ ತಪ್ಪುಗಳಾಗಿವೆ ಎಂಬುದನ್ನು ಯಾರೂ ನಿರಾಕರಿಸುತ್ತಿಲ್ಲ. ಆದರೆ ಆ ತಪ್ಪುಗಳು ಪ್ರಸ್ತುತ ಸಮಾಜದ ಶಾಂತಿ ಕದಡಲು ಕಾರಣವಾಗಬಾರದು’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.