ADVERTISEMENT

ತೇಜಸ್ವಿ ಯಾದವ್ ವಿರುದ್ಧ ಸಮನ್ಸ್‌: ತೀರ್ಪು ಕಾಯ್ದಿರಿಸಿದ ಕೋರ್ಟ್‌

ಪಿಟಿಐ
Published 9 ಆಗಸ್ಟ್ 2023, 14:26 IST
Last Updated 9 ಆಗಸ್ಟ್ 2023, 14:26 IST
ತೇಜಸ್ವಿ ಯಾದವ್
ತೇಜಸ್ವಿ ಯಾದವ್   

ಅಹಮದಾಬಾದ್‌: ಮಾನಹಾನಿ ಪ್ರಕರಣದಲ್ಲಿ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರಿಗೆ ಸಮನ್ಸ್‌ ಜಾರಿ ಮಾಡುವ ಕುರಿತ ಆದೇಶವನ್ನು ಇಲ್ಲಿನ ಮೆಟ್ರೊಪಾಲಿಟನ್‌ ನ್ಯಾಯಾಲಯವು ಆಗಸ್ಟ್ 28ಕ್ಕೆ ಕಾಯ್ದಿರಿಸಿದೆ.

ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್‌ ಡಿ.ಜೆ.ಪಾರ್ಮರ್‌ ಅವರು ಮಂಗಳವಾರ, 'ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500ರ ಅಡಿಯಲ್ಲಿ ಯಾದವ್‌ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್‌ ಜಾರಿ ಮಾಡುವ ಕುರಿತು ಆಗಸ್ಟ್‌ 28ರಂದು ಕೋರ್ಟ್‌ ಆದೇಶ ಪ್ರಕಟಿಸಲಿದೆ’ ಎಂದು ತಿಳಿಸಿದರು.

ಮಾರ್ಚ್‌ 21ರಂದು ಮಾಧ್ಯಮಗಳ ಎದುರು ಯಾದವ್‌ ಅವರು, ‘ಗುಜರಾತಿಗರು ಮಾತ್ರ ಗೂಂಡಾಗಳು’ ಎಂದಿದ್ದರು. ಈ ಮೂಲಕ ಗುಜರಾತ್ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಉದ್ಯಮಿ ಹರ್ಷ ಮೆಹ್ತಾ  ಎಂಬವರು ದೂರು ನೀಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.