ADVERTISEMENT

ದೆಹಲಿಯಲ್ಲಿ ಹೊಸದಾಗಿ 1,652 ಕೋವಿಡ್ ಪ್ರಕರಣಗಳು ದೃಢ, ಪಾಸಿಟಿವಿಟಿ ದರ ಇಳಿಕೆ

ಪಿಟಿಐ
Published 17 ಆಗಸ್ಟ್ 2022, 16:00 IST
Last Updated 17 ಆಗಸ್ಟ್ 2022, 16:00 IST
   

ನವದೆಹಲಿ: ದೇಶದ ರಾಜಧಾನಿಯಲ್ಲಿ ಬುಧವಾರ ಹೊಸದಾಗಿ 1,652 ಪ್ರಕರಣಗಳು ದೃಢಪಟ್ಟಿದ್ದು, 8 ಸಾವು ಸಂಭವಿಸಿವೆ.

ದಿನದ ಪಾಸಿಟಿವಿಟಿ ದರ ಶೇಕಡ 9.92ರಷ್ಟು ದಾಖಲಾಗಿದೆ.

ಮಂಗಳವಾರ 917 ಪ್ರಕರಣ ಧೃಡಪಟ್ಟು, ಶೇಕಡ 19.20ರಷ್ಟು ಪಾಸಿಟಿವಿಟಿ ದರ ದಾಖಲಾಗಿತ್ತು.

ADVERTISEMENT

ಈ ಮೂಲಕ ದೆಹಲಿಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 19,88,391ಕ್ಕೆ ಏರಿದ್ದು, ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 26,400ರಷ್ಟಾಗಿದೆ.

ಬುಧವಾರ 16,658 ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎಂದು ದೆಹಲಿಯ ಆರೋಗ್ಯ ಸಚಿವಾಲಯ ತಿಳಿಸಿದೆ.

ಸೋಮವಾರ, 1,227 ಹೊಸ ಪ್ರಕರಣಗಳ ಜೊತೆ ಶೇಕಡ 14.57 ಪಾಸಿಟಿವಿಟಿ ದರ ವರದಿಯಾಗಿತ್ತು.

ಇದಕ್ಕೂ ಮುನ್ನ, ನವದೆಹಲಿಯಲ್ಲಿ ಕಳೆದ 12 ದಿನಗಳಲ್ಲಿ ನಿತ್ಯ 2,000ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದವು. ಭಾನುವಾರ 2,162 ಪ್ರಕರಣ ವರದಿಯಾಗಿದ್ದವು. ಶನಿವಾರ, 9 ಸಾವು ಮತ್ತು 2,031ಹೊಸ ಪ್ರಕರಣ ವರದಿಯಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.