ADVERTISEMENT

ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ: ಭಾರತದಲ್ಲಿ ಕ್ಲಿನಿಕಲ್ ಟ್ರಯಲ್ಸ್ ಆರಂಭ

ಏಜೆನ್ಸೀಸ್
Published 1 ಡಿಸೆಂಬರ್ 2020, 14:51 IST
Last Updated 1 ಡಿಸೆಂಬರ್ 2020, 14:51 IST
   

ನವದೆಹಲಿ: ಕೋವಿಡ್–19 ನಿಯಂತ್ರಣಕ್ಕಾಗಿ ರಷ್ಯಾ ಅಭಿವೃದ್ಧಿಪಡಿಸಿರುವ ‘ಸ್ಪುಟ್ನಿಕ್ ವಿ’ ಲಸಿಕೆಯ ಕ್ಲಿನಿಕಲ್‌ ಟ್ರಯಲ್ಸ್‌ ಭಾರತದಲ್ಲಿ ಇಂದು ಆರಂಭವಾಗಿದೆ.

ಎರಡು ಮತ್ತು ಮೂರನೇ ಹಂತದ ಪ್ರಯೋಗ ಆರಂಭಿಸಿರುವುದಾಗಿ ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್‌) ಮತ್ತು ಭಾರತದ ರೆಡ್ಡೀಸ್ ಲ್ಯಾಬೊರೇಟರೀಸ್‌ ಹೇಳಿಕೆ ನೀಡಿವೆ.

ರಷ್ಯಾ ಆಗಸ್ಟ್‌ 11ರಂದು ಕೋವಿಡ್–19 ಲಸಿಕೆ ನೋಂದಾಯಿಸಿಕೊಂಡಿತ್ತು. ಆ ಮೂಲಕ ಲಸಿಕೆ ನೋಂದಾಯಿಸಿಕೊಂಡ ಪ್ರಪಂಚದ ಮೊದಲ ದೇಶ ಎನಿಸಿಕೊಂಡಿತ್ತು. ರಷ್ಯಾದ ಗಮಲೆಯಾ ನ್ಯಾಷನಲ್ ರಿಸರ್ಚ್ ಇನ್ಸಿಟ್ಯೂಟ್ ಆಫ್ ಎಪಿಡೆಮಿಯೊಲಜಿ ಆ್ಯಂಡ್ ಮೈಕ್ರೊಬಯಾಲಜಿಯಲ್ಲಿ ‘ಸ್ಪುಟ್ನಿಕ್ ವಿ’ ಲಸಿಕೆ ಅಭಿವೃದ್ಧಿಪಡಿಸಲಾಗಿದೆ..

ADVERTISEMENT

ಸ್ಪುಟ್ನಿಕ್ ವಿ ಲಸಿಕೆ ಕೋವಿಡ್‌ಗೆ ಶೇ.92ರಷ್ಟು ಪರಿಣಾಮಕಾರಿ ಆಗಿದೆ ಎಂದು ಆರ್‌ಡಿಐಎಫ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.