ADVERTISEMENT

Covid-19 India Update | 20.88 ಲಕ್ಷ ದಾಟಿದ ಸೋಂಕಿತರು, ಒಂದೇ ದಿನ 933 ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಆಗಸ್ಟ್ 2020, 4:56 IST
Last Updated 8 ಆಗಸ್ಟ್ 2020, 4:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ದೇಶದಾದ್ಯಂತ ಇಂದು 61,537 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಕಳೆದ 24 ಗಂಟೆಗಳಲ್ಲಿ 933 ಮಂದಿ ಮೃತಪಟ್ಟಿದ್ದಾರೆ.

ಇದರೊಂದಿಗೆ ದೇಶದಲ್ಲಿ ಈವರೆಗೆ 20,88,612 ಮಂದಿಗೆ ಸೋಂಕು ತಗುಲಿದ್ದು, 42,518 ಮಂದಿ ಸಾವಿಗೀಡಾಗಿದ್ದಾರೆ. ಇದುವರೆಗೆ 14,27,006 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 6,19,088 ಸಕ್ರಿಯ ಪ್ರಕರಣಗಳು ಇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ 4,90,262 ಜನರಿಗೆ ಸೋಂಕು ತಗುಲಿದೆ. 1,45,889 ಸಕ್ರಿಯ ಪ್ರಕರಣಗಳೊಂದಿಗೆ ಇದುವರೆಗೆ 3,27,281 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೂ ಒಟ್ಟಾರೆ 17,092 ಮಂದಿ ಕೋವಿಡ್-19ನಿಂದ ಮೃತಪಟ್ಟಿದ್ದಾರೆ.

ADVERTISEMENT

ತಮಿಳುನಾಡಿನಲ್ಲಿ ಈವರೆಗೂ 2,85,024 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, 2,27,575 ಮಂದಿ ಗುಣಮುಖರಾಗಿದ್ದಾರೆ. 52,759 ಸಕ್ರಿಯ ಪ್ರಕರಣಗಳಿದ್ದು, 4,690 ಮಂದಿ ಕೊರೊನಾ ವೈರಸ್‌ನಿಂದಾಗಿ ಸಾವಿಗೀಡಾಗಿದ್ದಾರೆ.

ಆಂದ್ರ ಪ್ರದೇಶದಲ್ಲೂ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಈವರೆಗೂ 2,06,960 ಜನರಿಗೆ ಸೋಂಕು ತಗುಲಿದೆ. 84,654 ಸಕ್ರಿಯ ಪ್ರಕರಣಗಳೊಂದಿಗೆ 1,20,464 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ 1,842 ಜನರು ಸಾವಿಗೀಡಾಗಿದ್ದಾರೆ.

ಇತ್ತ ರಾಜಧಾನಿ ದೆಹಲಿಯಲ್ಲಿ 1,42,723 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದುವರೆಗೆ 4,082 ಮಂದಿ ಕೊನೆಯುಸಿರೆಳೆದಿದ್ದಾರೆ. 10,409 ಸಕ್ರಿಯ ಪ್ರಕರಣಗಳೊಂದಿಗೆ 1,28,232 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಈವರೆಗೂ 1,13,378 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದ್ದು, 66,834 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 44,563 ಸಕ್ರಿಯ ಪ್ರಕಗಳೊಂದಿಗೆ ಒಟ್ಟಾರೆ 1,981 ಜನರು ಮೃತಪಟ್ಟಿದ್ದಾರೆ.

ಇನ್ನುಳಿದಂತೆ ಗುಜರಾತ್‌ನಲ್ಲಿ 2,605, ಪಶ್ಚಿಮ ಬಂಗಾಳದಲ್ಲಿ 1,954, ಉತ್ತರ ಪ್ರದೇಶ 1,981, ಮಧ್ಯ ಪ್ರದೇಶ 962 ಮತ್ತು ರಾಜಸ್ಥಾನದಲ್ಲಿ 767 ಜನರು ಕೊರೊನಾ ವೈರಸ್‌ನಿಂದ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.