ADVERTISEMENT

Covid-19 India Update | ಒಂದೇ ದಿನ 52,000ಕ್ಕಿಂತಲೂ ಹೆಚ್ಚು ಮಂದಿ ಚೇತರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2020, 16:09 IST
Last Updated 12 ನವೆಂಬರ್ 2020, 16:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 86.8 ಲಕ್ಷ ದಾಟಿದೆ. 47,905 ಹೊಸ ಪ್ರಕರಣಗಳು ದಾಖಲಾಗಿದ್ದು 550 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಚೇತರಿಕೆ ಪ್ರಮಾಣ 92.79ಕ್ಕೇರಿದೆ.

ಇದರೊಂದಿಗೆ ದೇಶದಲ್ಲಿ ಈವರೆಗೆ 86,83,917 ಮಂದಿಗೆ ಸೋಂಕು ತಗುಲಿದ್ದು, 1,28,121 ಮಂದಿ ಸಾವಿಗೀಡಾಗಿದ್ದಾರೆ. ಇದುವರೆಗೆ 80,66,502 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಸದ್ಯ 4,89,294 ಸಕ್ರಿಯ ಪ್ರಕರಣಗಳು ಇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ADVERTISEMENT

ನವೆಂಬರ್ 11ರವರೆಗೆ ದೇಶದಲ್ಲಿ 12,19,62,509 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ 11,93,358 ಜನರನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.

ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಐಸಿಎಂಆರ್ ಭಾರತದಲ್ಲಿ ಕೋವಿಶೀಲ್ಡ್‌ನ 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ದಾಖಲಾತಿ ಪೂರ್ಣಗೊಳಿಸುವುದಾಗಿ ಪ್ರಕಟಿಸಿದೆ. ಐಸಿಎಂಆರ್ ಮತ್ತು ಎಸ್‌ಐಐ ಅಮೆರಿಕದ ನೊವಾವಾಕ್ಸ್ ಅಭಿವೃದ್ಧಿಪಡಿಸಿದ ಕೋವೊವಾಕ್ಸ್ (ನೊವಾವಾಕ್ಸ್)ನ ಕ್ಲಿನಿಕಲ್ ಅಭಿವೃದ್ಧಿಗೆ ಕೂಡ ಸಹಕರಿಸಿದೆ.

ರಾಜಸ್ಥಾನದಲ್ಲಿ 2,176 ಹೊಸ ಪ್ರಕರಣಗಳು ದಾಖಲಾಗಿದ್ದು 13 ಮಂದಿ ಮೃತಪಟ್ಟಿದ್ದಾರೆ. ಇಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 2 ,032 ಆಗಿದೆ.ಜೈಪುರದಲ್ಲಿ ಮೃತಪಟ್ಟವರ ಸಂಖ್ಯೆ 319 ಆಗಿದ್ದು ಜೋಧಾಪುರ್‌ನಲ್ಲಿ 199 ಆಗಿದೆ.

ಕೇರಳದಲ್ಲಿ 5,537 ಹೊಸ ಪ್ರಕರಣಗಳು ವರದಿ ಆಗಿದ್ದು 6.199 ರೋಗಿಗಳು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಹೇಳಿದ್ದಾರೆ. ಗುರುವಾರ 61 ಆರೋಗ್ಯಕರ್ತರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.

ತೆಲಂಗಾಣದಲ್ಲಿ ಗುರುವಾರ 1,015 ಸೋಂಕು ಪ್ರಕರಣಗಳು ವರದಿ ಆಗಿದ್ದು 3 ರೋಗಿಗಳು ಮೃತರಾಗಿದ್ದಾರೆ.ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2.54 ಲಕ್ಷಕ್ಕೇರಿದ್ದು ಮೃತರ ಸಂಖ್ಯೆ 1,393 ಆಗಿದೆ.

ಮಿಜೊರಾಂನಲ್ಲಿ 25 ಹೊಸ ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ 3,242ಕ್ಕೇರಿದೆ. ಇಲ್ಲಿ 552 ಸಕ್ರಿಯ ಪ್ರಕರಣಗಳಿವೆ.
ಮುಂಬೈನಲ್ಲಿ 858 ಹೊಸ ಪ್ರಕರಣಗಳು ಮತ್ತು19 ಮರಣ ವರದಿ ಆಗಿದೆ

ತಮಿಳುನಾಡಿನಲ್ಲಿ 2,112 ಹೊಸ ಪ್ರಕರಣಗಳು ವರದಿ ಆಗಿದ್ದು 25 ಮಂದಿ ಮೃತಪಟ್ಟಿದ್ದಾರೆ. 18, 395 ಸಕ್ರಿಯ ಪ್ರಕರಣಗಳು ಇಲ್ಲಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 617 ಹೊಸ ಪ್ರಕರಣಗಳು ದಾಖಲಾಗಿವೆ.

ಆಂಧ್ರ ಪ್ರದೇಶದಲ್ಲಿ 1,728 ಹೊಸ ಪ್ರಕರಣಗಳು ದಾಖಲಾಗಿದ್ದು ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ8,49,705 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.