ADVERTISEMENT

ದೆಹಲಿಯಲ್ಲಿ ಕೋವಿಡ್–19 ಸೋಂಕಿತ ವೈದ್ಯನ ಪತ್ನಿ, ಮಗಳು ಐವರಲ್ಲಿ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 2:51 IST
Last Updated 26 ಮಾರ್ಚ್ 2020, 2:51 IST
   

ನವದೆಹಲಿ:ದೆಹಲಿಯ ಕೋವಿಡ್‌–19 ಸೋಂಕಿತ ವೈದ್ಯರೊಬ್ಬರ ಹೆಂಡತಿ (48) ಹಾಗೂ ಮಗಳು (17) ಸೇರಿದಂತೆ ಹೊಸದಾಗಿ ಒಟ್ಟು ಐವರಲ್ಲಿ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 35ಕ್ಕೆ ತಲುಪಿದೆ ಎಂದು ದೆಹಲಿಯ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ವೈದ್ಯ ಇಲ್ಲಿನಶಾಹ್ದಾರದಲ್ಲಿ ನಡೆಸುತ್ತಿರುವಕ್ಲಿನಿಕ್‌ಗೆ ಸೌದಿ ಅರೇಬಿಯಾದಿಂದ ಹಿಂದಿರುಗಿದ್ದ ಮಹಿಳೆಯೊಬ್ಬರು (38) ಬಂದಿದ್ದರು. ಅದಾದ ನಂತರ ವೈದ್ಯರಿಗೂ ಕೋವಿಡ್‌–19 ಇರುವುದು ಮಾರ್ಚ್‌ 21ರಂದು ದೃಢಪಟ್ಟಿತ್ತು. ಬಳಿಕ ಈ ಇಬ್ಬರಿಗೂಗುರು ತೇಜ್‌ಬಹದ್ದೂರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆ ಮಹಿಳೆಯೊಂದಿಗೆ ಒಡನಾಟದಲ್ಲಿದ್ದ ಜಹಾಂಗೀರ್‌ ಪುರಿಯ 35 ವರ್ಷದ ವ್ಯಕ್ತಿಗೂ ಸೋಂಕು ಇರುವುದು ಬುಧವಾರ ದೃಢವಾಗಿದೆ.

ಮಹಿಳೆಯ ಕಟುಂಬದ ನಾಲ್ವರಿಗೂ ಸೋಂಕು ಇರುವುದು ಈಗಾಗಲೇ ಗೊತ್ತಾಗಿದೆ.

ADVERTISEMENT

ಸೈನಿಕ್‌ ಫಾರ್ಮ್‌ಏರಿಯಾ ನಿವಾಸಿಗಳಾದ 41 ವಯಸ್ಸಿನ ವ್ಯಕ್ತಿ ಹಾಗೂ 21 ವರ್ಷ ಯುವಕ ಬುಧವಾರ ಸೋಂಕು ದೃಢಪಟ್ಟ ಇನ್ನಿಬ್ಬರು. ಈ ಇಬ್ಬರೂ ವಿದೇಶದಿಂದ ಆಗಮಿಸಿದ್ದರು ಮತ್ತು ಸರ್ಕಾರದ ಆದೇಶದಂತೆ ಕ್ವಾರಂಟೈನ್‌ನಲ್ಲಿದ್ದರು.

‘ವಿದೇಶದಿಂದ ಬಂದಿದ್ದ ಈ ಇಬ್ಬರನ್ನೂ ನೇರವಾಗಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಸದ್ಯ ಇಲ್ಲಿನ ಮೆದಾಂತ ಮತ್ತು ರಾಜೀವ್‌ ಗಾಂಧಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಲ್ಲಿದ್ದಾರೆ’ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ದೆಹಲಿಯಲ್ಲಿ ಕೋವಿಡ್‌–19ನಿಂದಾಗಿ ಒಂದು ಸಾವು ಸಂಭವಿಸಿದ್ದು, ಇದುವರೆಗೆ ಒಟ್ಟು ಐವರು ಸೋಂಕಿತರು ಗುಣಮುಖರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.