ADVERTISEMENT

Covid-19 India Update | ಕೋವಿಡ್‌: ಸಕ್ರಿಯ ಪ್ರಕರಣ 4.5 ಲಕ್ಷಕ್ಕೆ ಇಳಿಕೆ

ಪಿಟಿಐ
Published 12 ಜುಲೈ 2021, 6:11 IST
Last Updated 12 ಜುಲೈ 2021, 6:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ ಕೋವಿಡ್‌–19 ಸಕ್ರಿಯ ಪ್ರಕರಣಗಳ ಸಂಖ್ಯೆ3,219 ರಷ್ಟು ತಗ್ಗಿದ್ದು, ಸದ್ಯ ದೇಶದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 4,50,764.

ದೇಶದಾದ್ಯಂತ ಪಾಸಿಟಿವಿಟಿ ದರ ಶೇ 2.9ರಷ್ಟಿದೆ. ಕಳೆದ 21 ದಿನಗಳಿಂದ ಈ ಪಾಸಿಟಿವಿಟಿ ದರ ಪ್ರಮಾಣ ಶೇ 3ಕ್ಕಿಂತ ಕಡಿಮೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ 37,154 ಹೊಸ ಕೋವಿಡ್‌–19 ಸೋಂಕಿನ ಪ್ರಕರಣಗಳು ವರದಿಯಾಗಿದ್ದು, 724 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ದೇಶದ ಒಟ್ಟು ಕೋವಿಡ್‌ ಸೋಂಕಿತರ ಸಂಖ್ಯೆ 3,08,74,376ಕ್ಕೆ ಏರಿದೆ. ಮೃತರ ಸಂಖ್ಯೆ 4,08,899ಕ್ಕೆ ಏರಿದೆ. ಹಾಗೆಯೇ, ಗುಣಮುಖರಾಗಿರುವ ಪ್ರಮಾಣ ಮೂರು ಕೋಟಿ ದಾಟಿದೆ. ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಸೋಂಕಿತರ ಪ್ರಮಾಣ ಶೇ 1.46, ಗುಣಮುಖರ ಪ್ರಮಾಣ ಶೇ 97.22.

ADVERTISEMENT

ದೇಶದಾದ್ಯಂತ ಭಾನುವಾರ 14,32,343 ಮಾದರಿಗಳನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಯಿತು. ಈವರೆಗೆ ದೇಶದಲ್ಲಿ ಒಟ್ಟು 43,23,17,813 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.