ADVERTISEMENT

Covid-19 India Update | 72 ಲಕ್ಷ ದಾಟಿತು ಸೋಂಕಿತರ ಸಂಖ್ಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಅಕ್ಟೋಬರ್ 2020, 5:57 IST
Last Updated 14 ಅಕ್ಟೋಬರ್ 2020, 5:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಳೆದ 24 ಗಂಟೆಗಳಲ್ಲಿ ದೇಶದ ವಿವಿಧೆಡೆ ಒಟ್ಟು 63,509 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ದೇಶದ ಒಟ್ಟು ಸೋಂಕಿತರರ ಸಂಖ್ಯೆ 72,39,390 ಮುಟ್ಟಿದೆ. ಈ ಪೈಕಿ 8,26,876 ಸಕ್ರಿಯ ಪ್ರಕರಣಗಳು.

ಈವರೆಗೆ ಒಟ್ಟು 63,01,928 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟು 1,10,586 ಮಂದಿ ಮೃತಪಟ್ಟಿದ್ದಾರೆ.

ಕಳೆದ 24 ಗಂಟೆಗಳಲ್ಲಿ 730 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಕಳೆದ 6 ದಿನಗಳಿಂದ ಕೋವಿಡ್-19ರ ಸಕ್ರಿಯ ಪ್ರಕರಣಗಳು 9 ಲಕ್ಷದ ಒಳಗೆ ಇದೆ.

ADVERTISEMENT

ಒಟ್ಟು ಸೋಂಕಿತರ ಸಂಖ್ಯೆಯ ಅನುಪಾತದಲ್ಲಿ ಶೇ 11.42ರಷ್ಟು ಸಕ್ರಿಯ ಪ್ರಕರಣಗಳಿದ್ದರೆ, ಶೇ 1.53ರಷ್ಟು ಮೃತರ ಸಂಖ್ಯೆ ಇದೆ,

ಭಾರತದ ಕೋವಿಡ್-19 ಸೋಂಕಿತರ ಸಂಖ್ಯೆ ಆಗಸ್ಟ್ 7ರಂದು 20 ಲಕ್ಷ ದಾಟಿತು. ಆಗಸ್ಟ್ 23ರಂದು 30 ಲಕ್ಷ, ಸೆಪ್ಟೆಂಬರ್ 5ರಂದು 40 ಲಕ್ಷ, ಸೆ.16ರಂದು 50 ಲಕ್ಷ, ಸೆ.28ರಂದು 70 ಲಕ್ಷ ದಾಟಿತ್ತು.

ಅಕ್ಟೋಬರ್ 13ರವರೆಗೆ ಒಟ್ಟು 9,00,90,122 ಸ್ಯಾಂಪಲ್‌ಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಮಂಗಳವಾರ (ಅ.13) ಒಂದೇ ದಿನ 11,45,015 ಸ್ಯಾಂಪಲ್‌ಗಳನ್ನು ತಪಾಸಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.