ADVERTISEMENT

Covid-19 India Update: 132 ದಿನಗಳಲ್ಲೇ ಕಡಿಮೆ ಪ್ರಕರಣ ದಾಖಲು

ಡೆಕ್ಕನ್ ಹೆರಾಲ್ಡ್
Published 27 ಜುಲೈ 2021, 5:13 IST
Last Updated 27 ಜುಲೈ 2021, 5:13 IST
ಸಾಂದರ್ಭಿಕ ಚಿತ್ರ – ಎಎಫ್‌ಪಿ
ಸಾಂದರ್ಭಿಕ ಚಿತ್ರ – ಎಎಫ್‌ಪಿ   

ನವದೆಹಲಿ: ದೇಶದಲ್ಲಿ ಪ್ರತಿ ದಿನ ವರದಿಯಾಗುತ್ತಿರುವ ಹೊಸ ಕೋವಿಡ್ ಪ್ರಕರಣಗಳಲ್ಲಿ ಭಾರಿ ಇಳಿಕೆ ಕಂಡುಬಂದಿದೆ. 132 ದಿನಗಳ ಬಳಿಕ ಇದೇ ಮೊದಲ ಬಾರಿಗೆ ದೈನಂದಿನ ಪ್ರಕರಣಗಳ ಸಂಖ್ಯೆ 30 ಸಾವಿರಕ್ಕಿಂತ ಕಡಿಮೆ ವರದಿಯಾಗಿದೆ.

ಮಂಗಳವಾರ ಬೆಳಿಗ್ಗೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ ದೇಶದಲ್ಲಿ 29,689 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 415 ಸೋಂಕಿತರು ಮೃತಪಟ್ಟಿದ್ದಾರೆ.

ಇದರೊಂದಿಗೆ ಈವರೆಗೆ ಸೋಂಕಿತರಾದವರ ಒಟ್ಟು ಸಂಖ್ಯೆ 3,14,40,951 ತಲುಪಿದೆ. ಮೃತಪಟ್ಟವರ ಸಂಖ್ಯೆ 4,21,382ಕ್ಕೆ ಏರಿಕೆಯಾಗಿದೆ. 3,06,21,469 ಸೋಂಕಿತರು ಗುಣಮುಖರಾಗಿದ್ದಾರೆ.

ಸದ್ಯ ದೇಶದಲ್ಲಿ 3,98,100 ಸಕ್ರಿಯ ಪ್ರಕರಣಗಳಿವೆ. ಇದು ಒಟ್ಟು ಪ್ರಕರಣಗಳ ಶೇ 1.27ರಷ್ಟಾಗಿದೆ. ಒಂದೇ ದಿನ 42,363 ಮಂದಿ ಚೇತರಿಸಿಕೊಂಡಿದ್ದು, ಈಗ ಒಟ್ಟು ಚೇತರಿಕೆ ಪ್ರಮಾಣ ಶೇ 97.35ರಷ್ಟಿದೆ.

ದೇಶದಲ್ಲಿ ಈವರೆಗೆ 44,19,12,395 ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.