ADVERTISEMENT

548 ವೈದ್ಯರು, ನರ್ಸ್‌, ಅರೆವೈದ್ಯಕೀಯ ಸಿಬ್ಬಂದಿಗೆ ಸೋಂಕು

ಪಿಟಿಐ
Published 6 ಮೇ 2020, 18:45 IST
Last Updated 6 ಮೇ 2020, 18:45 IST
   

ನವದೆಹಲಿ: ದೇಶದಾದ್ಯಂತ 548 ವೈದ್ಯರು, ದಾದಿಯರುಮತ್ತು ಅರೆವೈದ್ಯಕೀಯ ಸಿಬ್ಬಂದಿಯಲ್ಲಿ ಕೋವಿಡ್‌ದೃಢಪಟ್ಟಿದೆ ಎಂದು ಕೇಂದ್ರದ ಅಧಿಕೃತ ಮೂಲಗಳು ತಿಳಿಸಿವೆ.

ಇವರಿಗೆಲ್ಲ ಸೋಂಕು ತಗುಲಿದ್ದು ಹೇಗೆ ಎಂಬುದರ ಕುರಿತು ಸೂಕ್ತ ತನಿಖೆ ನಡೆದಿಲ್ಲ. ಹಾಗಾಗಿ, ಇವರಿಂದ ಯಾರ‍್ಯಾರಿಗೆ ಸೋಂಕು ತಗುಲಿದೆ ಎಂಬುದರ ಮಾಹಿತಿಯೂ ಇಲ್ಲ ಎನ್ನಲಾಗಿದೆ.274 ದಾದಿಯರು, 69 ವೈದ್ಯರಿಗೆ ಸೋಂಕು ತಗುಲಿದೆ.

ಆರೋಗ್ಯ ಕಾರ್ಯಕರ್ತರು, ವಾರ್ಡ್‌ ಬಾಯ್‌ಗಳು, ಸ್ವಚ್ಛತಾ ಕಾರ್ಮಿಕರು, ಭದ್ರತಾ ಸಿಬ್ಬಂದಿ, ಲ್ಯಾಬ್‌ ಕೆಲಸಗಾರರು, ಲಾಂಡ್ರಿ ಮತ್ತು ಅಡುಗೆ ಸಿಬ್ಬಂದಿಯನ್ನು ಈ ದತ್ತಾಂಶದಲ್ಲಿ ಸೇರಿಸಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.