ADVERTISEMENT

ಪ್ರಧಾನಿ ಮೋದಿಗೆ ರಾಖಿ ಕಳುಹಿಸಿದ ಪಾಕ್‌ ಮೂಲದ ಸೋದರಿ ಖಮರ್ ಮೊಹ್ಸಿನ್ ಶೇಖ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 5:24 IST
Last Updated 1 ಆಗಸ್ಟ್ 2020, 5:24 IST
   

ಅಹಮದಾಬಾದ್: ಪಾಕಿಸ್ತಾನ ಮೂಲದ ಮುಸ್ಲಿಂ ಮಹಿಳೆ ಖಮರ್ ಮೊಹ್ಸಿನ್ ಶೇಖ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೋಸ್ಟ್‌ ಮೂಲಕ ರಾಖಿಯನ್ನು ಕಳುಹಿಸಿದ್ದಾರೆ.

ಕಳೆದ 25 ವರ್ಷಗಳಿಂದ ಮೊಹ್ಸಿನ್ ಶೇಖ್ ಅವರು ನರೇಂದ್ರ ಮೋದಿಗೆ ರಾಖಿ ಕಟ್ಟುತ್ತಿದ್ದಾರೆ. ಈ ಬಾರಿ ಕೋವಿಡ್‌ ಸಮಯವಾಗಿರುವುದರಿಂದ ದೆಹಲಿಗೆ ಪ್ರಯಾಣ ಮಾಡಲು ಕಷ್ಟಸಾಧ್ಯವಾಗಿರುವುದರಿಂದ ಅಂಚೆ ಮೂಲಕ ರಾಖಿಯನ್ನು ಕಳುಹಿಸಿದ್ದಾರೆ.

ಸೋಮವಾರ ಆಗಸ್ಟ್ 3ರಂದು ರಕ್ಷಾ ಬಂಧನ ಆಚರಿಸಲಾಗುತ್ತಿದ್ದು ಈ ಸಮಯದಲ್ಲಿ ನರೇಂದ್ರ ಮೋದಿಯವರಿಗೆ ಅನೇಕ ಸಹೋದರಿಯರು ರಾಖಿ ಕಟ್ಟುತ್ತಾರೆ.

ADVERTISEMENT

ಅಹಮದಾಬಾದ್‌ನಲ್ಲಿ ನೆಲೆಸಿರುವ ‘ರಾಖಿ ಸಹೋದರಿ’ ಎಂದೇ ಖ್ಯಾತರಾಗಿರುವ ಪಾಕ್‌ ಮೂಲದ ಮೊಹ್ಸಿನ್ ಶೇಖ್ ಕಳೆದ 30 ವರ್ಷಗಳಿಂದ ಮೋದಿ ಅವರಿಗೆ ಪರಿಚಿತರು. ಮೋದಿಯವರುನನ್ನಪ್ರೀತಿಯಿಂದ ಸಹೋದರಿ ಎಂದು ಕರೆಯುತ್ತಾರೆಂದು ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ಒಮ್ಮೆ ನಾನು ರಾಖಿ ಕಟ್ಟುವ ಸಂದರ್ಭದಲ್ಲಿ ನೀವು ಗುಜರಾತ್ ಮುಖ್ಯಮಂತ್ರಿಯಾಗಬೇಕು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಆಗ ಅವರು ನಕ್ಕರು, ನಂತರ ಗುಜರಾತ್ ಮುಖ್ಯಮಂತ್ರಿ ಕೂಡ ಆದರು. ಮತ್ತೊಂದು ದಿನ ಅವರು ಪ್ರಧಾನಿ ಕೂಡ ಆದರು. ನನ್ನ ಪ್ರಾರ್ಥನೆ ಫಲಿಸಿತು ಎಂದು ಶೇಖ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.